Tuesday, September 22, 2026

BDA Apartments

Tragic Raichur Accident Two Boys BDA JK_Adv BDA Adv
Home Front Page ಕೊರೋನಾ ಭೀತಿ ಹಿನ್ನೆಲೆ: ಮೈಸೂರಿನಲ್ಲಿ  ಗುತ್ತಿಗೆ ಪೌರಕಾರ್ಮಿಕರಿಗೆ ಮಾಸ್ಕ್ ಗಳ ವಿತರಣೆ…

ಕೊರೋನಾ ಭೀತಿ ಹಿನ್ನೆಲೆ: ಮೈಸೂರಿನಲ್ಲಿ  ಗುತ್ತಿಗೆ ಪೌರಕಾರ್ಮಿಕರಿಗೆ ಮಾಸ್ಕ್ ಗಳ ವಿತರಣೆ…

ಮೈಸೂರು,ಮಾ,19,2020(www.justkannada.in): ದಿನೇ ದಿನೇ ಕೋರೊನಾ ಸೋಂಕಿನ ಭೀತಿ ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಮೈಸೂರಿನಲ್ಲಿ ಗುತ್ತಿಗೆ ಪೌರಕಾರ್ಮಿಕರಿಗೆ ಮಾಸ್ಕ್ ಗಳನ್ನ  ವಿತರಣೆ ಮಾಡಲಾಗುತ್ತಿದೆ.

ಜೈ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಸುಮಾರು ೧150 ಕ್ಕೂ ಹೆಚ್ಚು ಗುತ್ತಿಗೆ ಪೌರ ಕಾರ್ಮಿಕರಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ. ವಲಯ ಕಚೇರಿ 8ರ  ಬಳಿ ಗುತ್ತಿಗೆ ಪೌರ ಕಾರ್ಮಿಕರಿಗೆ 14ನೇ ವಾರ್ಡ್ ನ ಪಾಲಿಕೆ ಸದಸ್ಯ ಸೌದ್ ಖಾನ್ ಮಾಸ್ಕ್ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ತಿಪ್ಪಯ್ಯ, ಹನುಮಂತು, ವೆಂಕಟೇಶ್ ಆರ್.ಲಕ್ಷ್ಮಣ್, ನರಸಿಂಹ ಶ್ರೀನಿವಾಸ್ ಭಾಗಿಯಾಗಿದ್ದರು. ಕೊರೋನಾ ಸೋಂಕಿನ ಭೀತಿ  ಮೈಸೂರಿಗೂ ಎದುರಾಗಿದೆ. ಸದ್ಯ ಮೈಸೂರಿನಲ್ಲಿ ಇವರೆಗೆ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ.

Key words: Corona virus-Distribution -Masks – labor-Mysore