Monday, September 21, 2026

BDA Apartments

ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ ನಟಿ ಸಮಂತಾ BDA JK_Adv BDA Adv
Home Cinema ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ ನಟಿ ಸಮಂತಾ

ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ ನಟಿ ಸಮಂತಾ

ಬೆಂಗಳೂರು, ಮಾರ್ಚ್ 19, 2020 (www.justkannada.in): ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ್ದಾರೆ ನಟಿ ಸಮಂತಾ ಅಕ್ಕಿನೇನಿ!

ಹೌದು. ನಟಿಯರು ಹಾಟ್ ಬಟ್ಟೆ ಧರಿಸಿದಾಗ ಟ್ರೋಲ್ ಮಾಡುವವರಿಗೆ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸವಾಲ್ ಹಾಕಿದ್ದಾರೆ. ಈ ಹಿಂದೆ ವಿದೇಶಕ್ಕೆ ತೆರಳಿದ್ದ ಅವರು ಬಿಕಿನಿ ಧರಿಸಿ ಸುದ್ದಿಯಾಗಿದ್ದರು.

ಕೆಲ ಟ್ರೋಲ್ ಪೇಜ್‍ಗಳು ಹಾಗೂ ಅಭಿಮಾನಿಗಳು ಕೂಡ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ನೀವು ರೀತಿ ಬಟ್ಟೆ ಧರಿಸಬಾರದು ಎಂದು ಟ್ರೋಲ್ ಮಾಡಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಸಮಂತಾ, ಮಧ್ಯದ ಬೆರಳಿನ ಫೋಟೋ ಹಾಕಿ ಟ್ರೋಲ್‍ಗಳಿಗೆ ಚಮಕ್ ನೀಡಿದ್ದರು. ಈಗ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿರುವ ಸಮಂತಾ, ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.