Saturday, September 12, 2026

BDA Apartments

ಕೊರೋನಾ ವೈರಸ್ ಭೀತಿ ಹಿನ್ನೆಲೆ: ಮೈಸೂರಿನ ಈಜುಕೊಳಗಳು ಸ್ತಬ್ಧ… BDA JK_Adv BDA Adv
Home Front Page ಕೊರೋನಾ ವೈರಸ್ ಭೀತಿ ಹಿನ್ನೆಲೆ: ಮೈಸೂರಿನ ಈಜುಕೊಳಗಳು ಸ್ತಬ್ಧ…

ಕೊರೋನಾ ವೈರಸ್ ಭೀತಿ ಹಿನ್ನೆಲೆ: ಮೈಸೂರಿನ ಈಜುಕೊಳಗಳು ಸ್ತಬ್ಧ…

ಮೈಸೂರು,ಮಾ,14,2020(www.justkannada.in):  ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯಾದ್ಯಂತ ಈಜುಕೊಳಗಳು ಜಿಮ್ , ಮಾಲ್ ಗಳು, ಸಿನಿಮಾಥಿಯೇಟರ್ ಕಾಲೇಜುಗಳನ್ನ ಒಂದು ವಾರಗಳ ಕಾಲ ಬಂದ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆ  ಮೈಸೂರಿನ ಈಜುಕೊಳಗಳು ಸ್ತಬ್ಧವಾಗಿದೆ.

ಮೈಸೂರಿನಲ್ಲಿ ಈಜುಕೊಳಗಳು ಸ್ವಿಮ್ಮರ್ ಗಳಿಲ್ಲದೆ ಖಾಲಿ ಖಾಲಿಯಾಗಿವೆ. ಮೈಸೂರು ವಿಶ್ವವಿದ್ಯಾನಿಲಯದ ಸರಸ್ವತಿಪುರಂ ಈಜುಕೊಳ, ಕ್ರೀಡಾ ಇಲಾಖೆಯ ಚಾಮುಂಡಿ ವಿಹಾರ್ ಈಜುಕೊಳ, ಮಹಾನಗರ ಪಾಲಿಕೆಯ ಜೆ‌.ಪಿ.ನಗರ ಈಜುಕೊಳಗಳಿಗೆ ಸರ್ಕಾರದ ಆದೇಶದಂತೆ ಬೀಗ ಮುದ್ರೆ ಹಾಕಲಾಗಿದೆ

ಬೇಸಿಗೆ ಹಿನ್ನೆಲೆಯಲ್ಲಿ ಏಕಕಾಲಕ್ಕೆ ನೂರಾರು ಸಂಖ್ಯೆಯಲ್ಲಿ ಸ್ವಿಮ್ಮರ್‌ಗಳು ನೀರಿಗೆ ಇಳಿಯುತ್ತಿದ್ದರು. ಆದರೇ ಕೊರೋನಾ ಭಿತಿಯಿಂದಾಗಿ  ಈಜುಕೊಳಕ್ಕೆ ಬೀಗ ಹಾಕಿರುವುದರಿಂದ ಸ್ವಿಮ್ಮಿಂಗ್ ಫೂಲ್ ಖಾಲಿ ಹೊಡೆಯುತ್ತಿವೆ.

Key words: coronavirus horror- Mysore -swimming pools –lock-swimmer