ತೋಳ ದಾಳಿಯಿಂದಾಗಿ ಹತ್ತು ಜನರಿಗೆ ಗಾಯ: ಗ್ರಾಮಸ್ಥರಲ್ಲಿ ಆತಂಕ…

ಕೊಪ್ಪಳ,ಮಾ,14,2020(www.justkannada.in): ತೋಳ ದಾಳಿ ನಡೆಸಿದ ಪರಿಣಾಮ ಹತ್ತು ಜನರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ರಾತ್ರಿ ತೋಳ ದಾಳಿ  ಮಾಡಿದ್ದು ಈ ವೇಳೆ ಮಹಿಳೆಯರು ವೃದ್ದರು ಸೇರಿದಂತೆ ಹತ್ತು ಜನರನ್ನು ಮುಖ. ತಲೆ. ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದಾಗಿ ಗ್ರಾಮಸ್ಥರು ಭಯಭೀತರಾದರು.koppala- Ten people -injured – wolf- attack

ಹಾಗೆಯೇ ತೋಳ ದಾಳಿಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ತೋಳವನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿದ್ದಾರೆ. ತೋಳ ದಾಳಿಯಿಂದ ಗಾಯಗೊಂಡವರನ್ನು ಕುಷ್ಟಗಿ ತಾಲ್ಲೂಕು ಆಸ್ಪತ್ರೆಗೆ  ದಾಖಲಿಸಲಾಗಿದ್ದು  ಚಿಕಿತ್ಸೆ ಪಡೆಯುತ್ತಿದ್ದಾರೆ.

Key words:koppala- Ten people -injured – wolf- attack