ಬೆಳ್ಳಂಬೆಳಿಗ್ಗೆ ದೇವರಾಜ ಮಾರುಕಟ್ಟೆಗೆ ಭೇಟಿ: ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ ಮೈಸೂರು ಮಹಾನಗರ ಪಾಲಿಕೆ ತಂಡ…

ಮೈಸೂರು,ಮಾ,14,2020(www.justkannada.in):  ಎಲ್ಲೆಡೆ ಕೋರಾನಾ ವೈರಸ್ ಭೀತಿ ಹರಡಿರುವ ಹಿನ್ನಲೆ.  ಮೈಸೂರು ಮಹಾ ನಗರ ಪಾಲಿಕೆಗೆ  ಹೈ ಆಲರ್ಟ್ ಆಗಿದ್ದು ಇಂದು ಬೆಳ್ಳಂಬೆಳಿಗ್ಗೆಯೇ ನಗರದ ದೇವರಾಜ ಮಾರುಕಟ್ಟೆಗೆ ಪಾಲಿಕೆ ತಂಡ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿತು.visit-devaraja-market-morning-mysore-city-corporation-warned-traders

ಮೈಸೂರು ಮೇಯರ್ ತಸ್ಲಿಂ  ನೇತೃತ್ವದಲ್ಲಿ ಪಾಲಿಕೆ ಅರೋಗ್ಯ ಅಧಿಕಾರಿಗಳು ಉಪ‌ ಮೇಯರ್ ಶ್ರೀಧರ್,  ಪಾಲಿಕೆ ಸದಸ್ಯೆ ಶೋಭ ಸೇರಿ ಇತರರು ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ  ಪರಿಶೀಲಿಸಿದರು. ಈ ವೇಳೆ ಸ್ವಚ್ಚತೆ ಕಾಪಾಡುವಂತೆ ಅಲ್ಲಿನ ವ್ಯಾಪಾರಿಗಳಿಗೆ ಸೂಚನೆ ನೀಡಿದರು.

ಹಾಗೆಯೇ ಸ್ವಚ್ಚತೆಗೆ ಸಹಕರಿಸದಿದ್ದರೆ ಮಾರ್ಕೆಟ್ ಬಂದ್ ಮಾಡುವುದಾಗಿ  ಪಾಲಿಕೆ ಅಧಿಕಾರಿಗಳು  ಮತ್ತು ತಂಡ ಎಚ್ಚರಿಕೆ ನೀಡಿತು.

Key words: Visit- Devaraja Market – morning-Mysore – city corporation- warned -traders.