Friday, August 7, 2026

BDA Apartments

Home Front Page ರಾಜ್ಯಪಾಲರದ್ದು ಉಪ್ಪು ಖಾರ, ಮಸಾಲೆ ಇಲ್ಲದ ಭಾಷಣ-ಪರಿಷತ್ ವಿಪಕ್ಷ ನಾಯಕ ಎಸ್. ಆರ್ ಪಾಟೀಲ್ ಟೀಕೆ…

ರಾಜ್ಯಪಾಲರದ್ದು ಉಪ್ಪು ಖಾರ, ಮಸಾಲೆ ಇಲ್ಲದ ಭಾಷಣ-ಪರಿಷತ್ ವಿಪಕ್ಷ ನಾಯಕ ಎಸ್. ಆರ್ ಪಾಟೀಲ್ ಟೀಕೆ…

ಬೆಂಗಳೂರು,ಮಾ,9,2020(www.justkannada.in):  ರಾಜ್ಯಪಾಲರದ್ದು ಉಪ್ಪು ಖಾರ ಮಸಾಲೆ ಇಲ್ಲದ ಭಾಷಣ ಎಂದು ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಟೀಕಿಸಿದರು.

ಇಂದು ಸದನದಲ್ಲಿ ಮಾತನಾಡಿದ ಎಸ್. ಆರ್ ಪಾಟೀಲ್ ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಖಾರ ಮಸಾಲೆ ಇಲ್ಲ. ಸಪ್ಪೆ ಭಾಷಣ. ಒಗ್ಗರಣೆಯನ್ನೂ ಹಾಕಿಲ್ಲ. ಹಿಂದಿನ ಸರ್ಕಾರದ ಸಾಧನೆಗಳನ್ನೇ ಭಾಷಣದಲ್ಲಿ ಹೇಳಿದ್ದಾರೆ. ಬಿಜೆಪಿ ಮ್ಯಾಜಿಕ್ ನಂಬರ್ ತಲುಪ್ಪಿದ್ದೆ ದೊಡ್ಡ ಸಾಧನೆ ಎಂದು ಲೇವಡಿ ಮಾಡಿದರು.

ಹಾಗೆಯೇ ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡುವಲ್ಲೇ ಕಾಲ ಕಳೆದರು.  ನೆರೆ ಹಾವಳಿ ಬಂದಾಗ ಒಬ್ಬರೇ ಓಡಾಡಿದರು. ನಮ್ಮ 17 ಮಂದಿ ಶಾಸಕರನ್ನ ಒತ್ತೊಯ್ದರು. ಅವರನ್ನ ಮಂತ್ರಿ ಮಾಡುವುದರ ಕೆಲಸ ಮಾಡಿದ್ರು. ಬಿಜೆಪಿಯವರ ಸಾಧನೆ ಏನು ಇಲ್ಲ ಎಂದು ಎಸ್ ಆರ್ ಪಾಟೀಲ್  ಕಿಡಿಕಾರಿದರು.

Key words: governor –speech- legislative council-Opposition Leader -SR Patil