Tuesday, September 22, 2026

BDA Apartments

ಸರಗಳ್ಳತನ ಪ್ರಕರಣ ಆರೋಪಿಗೆ ಜೈಲುಶಿಕ್ಷೆ ವಿಧಿಸಿದ ಮೈಸೂರು ಕೋರ್ಟ್… BDA JK_Adv BDA Adv
Home Crime ಸರಗಳ್ಳತನ ಪ್ರಕರಣ ಆರೋಪಿಗೆ ಜೈಲುಶಿಕ್ಷೆ ವಿಧಿಸಿದ ಮೈಸೂರು ಕೋರ್ಟ್….

ಸರಗಳ್ಳತನ ಪ್ರಕರಣ ಆರೋಪಿಗೆ ಜೈಲುಶಿಕ್ಷೆ ವಿಧಿಸಿದ ಮೈಸೂರು ಕೋರ್ಟ್….

ಮೈಸೂರು,ಮಾ,3,2020(www.justkannada.in): ನಗರದಲ್ಲಿ ವಿವಿಧೆಡೆ ನಡೆದ ಸರಗಳ್ಳತನ ಪ್ರಕರಣದ ಆರೋಪಿಗೆ 3ವರ್ಷ ಜೈಲು ಶಿಕ್ಷೆ ವಿಧಿಸಿ ಮೈಸೂರು ಜಿಲ್ಲಾ  ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಮೈಸೂರು ನಿವಾಸಿ ಧರ್ಮೇಂದ್ರ ಪ್ರಸಾದ್ ಎಂಬಾತನೇ ಜೈಲುಶಿಕ್ಷೆಗೆ ಗುರಿಯಾದ ಆರೋಪಿ.  ಆರೋಪಿ ಧರ್ಮೇಂದ್ರ ಪ್ರಸಾದ್ 2012ರಲ್ಲಿ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಮನ ಅಮಾವಾಸ್ಯೆಯ ದಿನ ಸರಗಳ್ಳತನ ನಡೆಸಿದ್ದನು. ಈ ವೇಳೆ ಧರ್ಮೇಂದ್ರ ಪ್ರಸಾದ್ ಬಂಧಿಸಿ ಪೊಲೀಸರು ಆತನ ವಿರುದ್ಧ ನ್ಯಾಯಾಲಯಕ್ಕೆ  ಚಾರ್ಜ್ ಶೀಟ್ ಸಲ್ಲಿಸಿದ್ದರು.

ಇದಕ್ಕೂ ಮೊದಲು ಆರೋಪಿ ಧರ್ಮೇಂದ್ರ ಪ್ರಸಾದ್  ನಗರದ ವಿವಿಧೆಡೆ ಸರಗಳ್ಳತನ ನಡೆಸಿದ್ದ ಎನ್ನಲಾಗಿದೆ. ಇದೀಗ ಜಿಲ್ಲಾ ಸತ್ರ ನ್ಯಾಯಾಲಯ ಈತನಿಗೆ 3ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Key words: chain snatcher – jailed- Mysore court- order