Wednesday, August 5, 2026

BDA Apartments

Home Front Page ಎಲ್’ಪಿಜಿ ದರ ಹೆಚ್ಚಳ ಖಂಡಿಸಿ ಮೈಸೂರಲ್ಲಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ

ಎಲ್’ಪಿಜಿ ದರ ಹೆಚ್ಚಳ ಖಂಡಿಸಿ ಮೈಸೂರಲ್ಲಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ

ಮೈಸೂರು, ಫೆಬ್ರವರಿ 16, 2020 (www.justkannada.in): ಎಲ್ ಪಿ ಜಿ ದರ ಹೆಚ್ಚಳ ಹಿನ್ನೆಲೆ
ಕರ್ನಾಟಕ ಸೇನಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.

ನಗರದ ಆರ್ ಟಿ ಒ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರ ದಿನ ಬಳಕೆ ವಸ್ತುಗಳ ಬೆಲೆಯನ್ನು ದಿನೆದಿನೆ ಏರಿಸುತ್ತಿದೆ‌. ಜನ ಸಾಮಾನ್ಯರು ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ ಪಿಜಿ ದರ ಏರಿಕೆ ಮಾಡಿರುವುದು ಖಂಡನೀಯ. ಈ ಕೂಡಲೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿರುವದನ್ನು ಹಿಂಪಡೆಯಬೇಕು. ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.