ಪಾಕ್ ಪರ ಘೋಷಣೆ ಪ್ರಕರಣ: ಮೂವರು ವಿದ್ಯಾರ್ಥಿಗಳನ್ನ ಮತ್ತೆ ಬಂಧಿಸಿದ ಪೊಲೀಸರು…

ಹುಬ್ಬಳ್ಳಿ,ಫೆ,17,2020(www.justkannada.in): ಹುಬ್ಬಳ್ಳಿಯ ಕೆಎಲ್ ಇ ಕಾಲೇಜಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಮೂವರು ವಿದ್ಯಾರ್ಥಿಗಳನ್ನ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಫೆಬ್ರವರಿ 15 ರಂದು ಹುಬ್ಬಳ್ಳಿಯ ಕೆಎಲ್ ಇ ಕಾಲೇಜಿನಲ್ಲಿ ಜಮ್ಮಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ  ಅಮೀರ್, ಬಾಸಿತ್, ತಾಲಿಬ್  ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ನಂತರ ಮೂವರು ವಿದ್ಯಾರ್ಥಿಗಳನ್ನ ಪೊಲೀಸರು ಬಂಧಿಸಿದ್ದರು.

ಈ ನಡುವೆ ಮೂವರು ವಿದ್ಯಾರ್ಥಿಗಳನ್ನ ನಿನ್ನೆ ಸಿಆರ್ ಪಿಸಿ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸರು ಆಯುಕ್ತರು ತಿಳಿಸಿದ್ದರು. ಪಾಕ್ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳನ್ನ ಬಿಡುಗಡೆಗೊಳಿಸಿದ ಹಿನ್ನೆಲೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ನಿನ್ನೆ ರಾತ್ರಿ ಗೋಕುಲ್ ರೋಡ್ ಠಾಣಾ ಪೊಲೀಸರು ಮೂವರು ವಿದ್ಯಾರ್ಥಿಗಳನ್ನ ಮತ್ತೆ ಬಂಧಿಸಿದ್ದಾರೆ.

Key words: hubli- Pro-Pakistan-speal- case-  Re-arrested three students – police