Tuesday, September 22, 2026

BDA Apartments

ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಯೋಗ್ಯತೆ ಇದೆ ಎಂದಿದ್ದ ಸಚಿವ ರಮೇಶ್ ಜಾರಕಿಹ...
Home Front Page ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಯೋಗ್ಯತೆ ಇದೆ ಎಂದಿದ್ದ ಸಚಿವ ರಮೇಶ್ ಜಾರಕಿಹೊಳಿಗೆ ಸತೀಶ್ ಜಾರಕಿಹೊಳಿ...

ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಯೋಗ್ಯತೆ ಇದೆ ಎಂದಿದ್ದ ಸಚಿವ ರಮೇಶ್ ಜಾರಕಿಹೊಳಿಗೆ ಸತೀಶ್ ಜಾರಕಿಹೊಳಿ ಟಾಂಗ್…

ಬೆಳಗಾವಿ,ಫೆ,13,2020(www.justkannada.in):  ಸತೀಶ್ ಜಾರಕಿಹೊಳಿ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ ಎಂದು ಹೇಳಿಕೆ ನೀಡಿದ್ದ ಸಚಿವ ರಮೇಶ್ ಜಾರಕಿಹೊಳಿಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ತಹಶೀಲ್ದಾರ್ ಆಫೀಸ್ ನಲ್ಲೇ ನನ್ನ ಮಾತು ಕೇಳಲ್ಲ. ಇನ್ನು ಮುಖ್ಯಮಂತ್ರಿ ಮಾಡುವ ಮಾತು ಹೇಗೆ. ನನ್ನನ್ನು ಯಾವ ಪಕ್ಷದಿಂದ ಮುಖ್ಯಮಂತ್ರಿ ಮಾಡುತ್ತಾನೆ? ಇವನಿಗೆ ಏನು ಅಧಿಕಾರವಿದೆ? ಬೇರೆ ಪಕ್ಷದಲ್ಲಿದ್ದು ಇನ್ನೊಂದು ಪಕ್ಷದ ಮುಖಂಡನ ಬಗ್ಗೆ ಮಾತನಾಡೋದು  ಎಷ್ಟು ಸರಿ ಎಂದು ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕುಟುಕಿದರು.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬಿಜೆಪಿ ಮುಖಂಡರು ರಮೇಶ್‌ ಜಾರಕಿಹೊಳಿಯನ್ನು ನಿಯಂತ್ರಿಸಬೇಕು. ಪ್ರಧಾನಿ ಮೋದಿ, ಅಮಿತ್ ಶಾ ಗಿಂತ ರಮೇಶ್‌ ಜಾರಕಿಹೊಳಿ ಪವರ್ ಫುಲ್ ಆಗಿದ್ದಾನೆಯೇ..?  ನಮ್ಮ ಪಕ್ಷದಲ್ಲಿ ಇದ್ದು ಮಾತನಾಡಿದ್ರೆ ಓಕೆ. ಬಿಜೆಪಿಯಲ್ಲಿ ಇದ್ದು ಈ ರೀತಿ ಮಾತನಾಡೋದು ಸರಿಯಲ್ಲ ಎಂದು ಕಿಡಿಕಾರಿದರು.

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರನ್ನ ಮುಂದುವರೆಸಲೂ ಬಹುದು. ಅಥವಾ ಬದಲಾಯಸಬಹುದು. ಹೈಕಮಾಂಡ್ ದೆಹಲಿ ಚುನಾವಣೆಯಲ್ಲಿ ಬಿಜಿಯಾಗಿತ್ತು. ಈಗ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಬಹುದು ಎಂದು ತಿಳಿಸಿದರು.

 

key words: former minister-Satish Jarakiholi –tong-Minister -Ramesh Jarakiholi