Friday, August 14, 2026

BDA Apartments

Home Front Page ಬಂಡಾಯ ಶಮನಕ್ಕೆ ಮತ್ತೊಮ್ಮೆ ಸಚಿವ ಸಂಪುಟನೆ ಪುನಾರಚನೆಗೆ ಸಿಎಂ ಯಡಿಯೂರಪ್ಪ ಪ್ಲಾನ್!

ಬಂಡಾಯ ಶಮನಕ್ಕೆ ಮತ್ತೊಮ್ಮೆ ಸಚಿವ ಸಂಪುಟನೆ ಪುನಾರಚನೆಗೆ ಸಿಎಂ ಯಡಿಯೂರಪ್ಪ ಪ್ಲಾನ್!

ಬೆಂಗಳೂರು, ಫೆಬ್ರವರಿ 08, 2020 (www.justkannada.in): ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೀಘ್ರದಲ್ಲಿಯೇ ಸಂಪುಟ ಪುನಾರಚನೆ ಮಾಡಲು ಚಿಂತನೆ ನಡೆಸುತ್ತಿದ್ದಾರೆ.

ಸಂಪುಟ ವಿಸ್ತರಣೆಯಿಂದ ಕೇಸರಿ ಪಾಳಯದಲ್ಲಿ ಬಂಡಾಯದ ಹೊಗೆಯಾಡುವ ಎಲ್ಲಾ ಸೂಚನೆಗಳು ಎದುರಾಗುತ್ತಿರುವ ಬೆನ್ನಲ್ಲೇ ಬಂಡಾಯ ದೂರಾಗಿಸಲು ಸಿಎಂ ಈ ನಿರ್ಧಾರ ತೆಗೆದುಕೊಳ್ಳಲು ಚಿಂತನೆ ನಡೆಸಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ಇದೀಗ ಯಡಿಯೂರಪ್ಪ ಅವರಿಗೆ ಯಾವ ಯಾವ ಸಚಿವರಿಗೆ ಯಾವ ಸಚಿವ ಸ್ಥಾನ ನೀಡಬೇಕು ಹಾಗೂ ರಾಜ್ಯ ಬಜೆಟ್ ಬಗ್ಗೆ ಸಾಕಷ್ಟು ತಲೆ ಬಿಸಿ ಎದುರಾಗಿದೆ.

ಇವೆಲ್ಲಾ ಸಮಸ್ಯೆಗಳು ದೂರಾದ ಬಳಿಕ ಬಂಡಾಯದಿಂದ ದೂರ ಉಳಿಯಲು ಬಜೆಟ್ ಪೂರ್ಣಗೊಂಡ ಬಳಿಕ ಏಪ್ರಿಲ್ ತಿಂಗಳಿನಲ್ಲಿ ಸಂಪುಟ ಪುನಾರಚನೆ ಮಾಡಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ. ಇದರ ಪರಿಣಾಮ ಹಾಲಿ ಸಚಿವರ ಕುರ್ಚಿಗೆ ಕಂಟಕ ಎದುರಾಗಿದ್ದು, ಹಾಲಿ ಸಚಿವರು ಕಂಗಾಲಾಗಿದ್ದಾರೆ ಎನ್ನಲಾಗಿದೆ.