Thursday, August 13, 2026

BDA Apartments

Home Front Page ದೆಹಲಿ ವಿಧಾನ ಸಭೆ ಚುನಾವಣೆ: ತಪ್ಪದೇ ಮತದಾನ ಮಾಡುವಂತೆ ಮೋದಿ, ಕೇಜ್ರೀವಾಲ್ ಕರೆ

ದೆಹಲಿ ವಿಧಾನ ಸಭೆ ಚುನಾವಣೆ: ತಪ್ಪದೇ ಮತದಾನ ಮಾಡುವಂತೆ ಮೋದಿ, ಕೇಜ್ರೀವಾಲ್ ಕರೆ

ನವದೆಹಲಿ, ಫೆಬ್ರವರಿ 08, 2020 (www.justkannada.in): ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಆರಂಭವಾಗಿದೆ.

ಜನರು ತಪ್ಪದೆ ಮತದಾನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕರೆ ನೀಡಿದ್ದಾರೆ.

ಮೋದಿ ಚುನಾವಣೆಗೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ, ‘ಇದು ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ದಿನ. ಪ್ರಜಾಪ್ರಭುತ್ವದ ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮತದಾನದ ಹೊಸ ದಾಖಲೆಯನ್ನು ನಿರ್ಮಿಸಬೇಕೆಂದು ಕೋರಿದ್ದಾರೆ.

ಮುಖ್ಯಮಂತ್ರಿ ಕೇಜ್ರಿವಾಲ್‌, ಎಲ್ಲರೂ ತಪ್ಪದೆ ಮತ ಚಲಾಯಿಸಿ. ವಿಶೇಷವಾಗಿ ಮಹಿಳೆಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನೀವು ಮನೆಯ ಹೊಣೆಯನ್ನು ಹೊತ್ತುಕೊಂಡಂತೆಯೇ ದೇಶದ ಮತ್ತು ದೆಹಲಿಯ ಜವಾಬ್ದಾರಿಯನ್ನೂ ನಿಭಾಯಿಸಿ. ಎಲ್ಲ ಮಹಿಳೆಯರೂ ಮತದಾನಕ್ಕೆ ತೆರಳಿ ಮತ್ತು ಪುರುಷರನ್ನೂ ಮನೆಯಿಂದ ಕರೆದೊಯ್ಯಿರಿ’ ಎಂದು ಕರೆ ನೀಡಿದ್ದಾರೆ.