Tuesday, September 8, 2026

BDA Apartments

Home Front Page ಬೀದಿನಾಯಿ ದಾಳಿಗೆ 50ಕ್ಕೂ ಹೆಚ್ಚು ಕೋಳಿ ಸಾವು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ…

ಬೀದಿನಾಯಿ ದಾಳಿಗೆ 50ಕ್ಕೂ ಹೆಚ್ಚು ಕೋಳಿ ಸಾವು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ…

ಮೈಸೂರು,ಫೆ,4,2020(www.justkannada.in): ಬೀದಿ ನಾಯಿ ದಾಳಿಗೆ 50ಕ್ಕೂ ಹೆಚ್ಚು ಕೋಳಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಸತೀಶ್ ಮತ್ತು ಸುರೇಶ್ ಅವರ ತೋಟದಲ್ಲಿದ್ದ ಕೋಳಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಕೋಳಿಗಳನ್ನು ಸಾಯಿಸಿ ಕಚ್ಚಿಕೊಂಡು ಓಡಿದ್ದು ಬೀದಿ ನಾಯಿಗಳ ದಾಳಿಗೆ 50ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ.

ಗದ್ದಿಗೆ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆ ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು  ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: 50 hen-deaths-street dogs-Villagers-outrage – negligence -authorities.