Tuesday, September 8, 2026

BDA Apartments

Home Cinema ರಾಮನಗರದಲ್ಲೇ ನಿಖಿಲ್ ಕಲ್ಯಾಣ ಎಂದ ಎಚ್ಡಿಕೆ: ಫೆ.10ಕ್ಕೆ ಎಂಗೇಜ್’ಮೆಂಟ್

ರಾಮನಗರದಲ್ಲೇ ನಿಖಿಲ್ ಕಲ್ಯಾಣ ಎಂದ ಎಚ್ಡಿಕೆ: ಫೆ.10ಕ್ಕೆ ಎಂಗೇಜ್’ಮೆಂಟ್

ರಾಮನಗರ, ಫೆಬ್ರವರಿ 04, 2020 (www.justkannada.in): ನಿಖಿಲ್ ಕುಮಾರಸ್ವಾಮಿ-ರೇವತಿ ಅವರ ನಿಶ್ಚಿತಾರ್ಥ ಇದೇ ಫೆಬ್ರವರಿ 10, 2020ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಇಬ್ಬರ ಮದುವೆಯನ್ನು ರಾಮನಗರ-ಚನ್ನಪಟ್ಟಣದ ನಡುವೆ ಮಾಡುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಕುರಿತಂತೆ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ, ನಾನು ಹುಟ್ಟಿದ್ದು ಹಾಸನದಲ್ಲಿ, ಆದ್ರೂ ರಾಜಕೀಯವಾಗಿ ಜನ್ಮ ನೀಡಿದ್ದು ರಾಮನಗರ. ನನ್ನ ಮನೆಯಲ್ಲಿ ನಡೆಯುವುದು ಇದೊಂದೆ ಶುಭ ಕಾರ್ಯ.

ಹೀಗಾಗಿ ಇಂತಹ ಕಾರ್ಯಕ್ಕೆ ನನ್ನ ಜನರನ್ನು ಕರೆಯಬೇಕು. ರಾಮನಗರ, ಮಂಡ್ಯ ಜಿಲ್ಲೆಯ ಜನರಿಗೆ ಊಟ ಹಾಕಿಸಬೇಕು ಎಂಬುದು ನನ್ನ ಆಸೆ. ಬಹುತೇಕ ನಾಯಕರು ತಮ್ಮ ಮಕ್ಕಳ ಮದುವೆಗಳನ್ನು ಬೆಂಗಳೂರಿನಲ್ಲೇ ಮಾಡುತ್ತಾರೆ. ಆದ್ರೇ ನಾನು  ಮಾತ್ರ ಇಲ್ಲಿಯೇ ಮಾಡಬೇಕು ಎಂಬುದಾಗಿ ನಿರ್ಧರಿಸಿದ್ದೇನೆ. ಅದಕ್ಕಾಗಿ ಜಾಗ ಹುಡುಕಾಚವೂ ನಡೆಸಿರುವುದಾಗಿ ತಿಳಿಸಿದ್ದಾರೆ.