Sunday, October 11, 2026

Dasara Wishes

ಇಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ DasraWishes_JK DasraWishes JK
Happy Dasara
Home Cinema ಸಿನಿಮಾ ಮೆಚ್ಚಿ ಪತ್ರಬರೆದು ದುಡ್ಡು ಕಳುಹಿಸಿದ್ದ ಮೈಸೂರಿನ ಅಭಿಮಾನಿ ಮೀಟ್ ಮಾಡಿದ ರಿಷಬ್ ಶೆಟ್ರು!

ಸಿನಿಮಾ ಮೆಚ್ಚಿ ಪತ್ರಬರೆದು ದುಡ್ಡು ಕಳುಹಿಸಿದ್ದ ಮೈಸೂರಿನ ಅಭಿಮಾನಿ ಮೀಟ್ ಮಾಡಿದ ರಿಷಬ್ ಶೆಟ್ರು!

ಮೈಸೂರು, ಫೆಬ್ರವರಿ 03, 2020 (www.justkannada.in): ಮೈಸೂರಿನಿಂದ ತನಗೆ ಹಣ ಕಳುಹಿಸಿದ್ದ ಅಪರೂಪದ ಅಭಿಮಾನಿಯನ್ನ ನಿರ್ದೇಶಕ ರಿಷಬ್ ಶೆಟ್ಟಿ ಭೇಟಿಯಾಗಿ ಧನ್ಯವಾದ ಹೇಳಿದ್ದಾರೆ.

ಮೈಸೂರಿನ ಅಂಬೇಡ್ಕರ್ ರಸ್ತೆಯಲ್ಲಿ ಭರತ್ ರಾಮಸ್ವಾಮಿ ನಡೆಸುತ್ತಿರುವ ಸಮಾನತೆ ಪ್ರಕಾಶನ ಸಂಸ್ಥೆಗೆ ಭೇಟಿ ನೀಡಿದ ನಿರ್ದೇಶಕ ರಿಷಬ್‌ಶೆಟ್ಟಿ ಪತ್ರ ಹಾಗೂ ಹಣ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನೋಡಿ 200ರೂ. ಕಳುಹಿಸಿದ್ದ ಅಭಿಮಾನಿ ಭರತ್ ರಾಮಸ್ವಾಮಿರನ್ನ ಭೇಟಿ ಮಾಡಬೇಕು ಅಂತ ಯೋಚಿಸಿದ್ದೆ, ಇಂದು ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಬಂದಿದ್ದೆ ಅವರನ್ನ ಭೇಟಿಯಾದೆ. ಇಂತಹ ಅಭಿಮಾನಿಗಳಿಂದ ಒಳ್ಳೆ ಚಿತ್ರಗಳು ಗೆಲ್ಲುತ್ತವೆ ಎಂದು ಹೇಳಿದ್ದರು.