Thursday, August 6, 2026

BDA Apartments

Home Front Page ಮೈಸೂರು ವಿವಿಯಲ್ಲಿ ಫ್ರಿ ಕಾಶ್ಮೀರ ಪ್ಲೆಕಾರ್ಡ್ ಪ್ರದರ್ಶನ ಪ್ರಕರಣ: ಎಫ್‌ಐಆರ್ ಆದ ವಿದ್ಯಾರ್ಥಿ ಮುಖಂಡರ ಬಂಧನಕ್ಕೆ...

ಮೈಸೂರು ವಿವಿಯಲ್ಲಿ ಫ್ರಿ ಕಾಶ್ಮೀರ ಪ್ಲೆಕಾರ್ಡ್ ಪ್ರದರ್ಶನ ಪ್ರಕರಣ: ಎಫ್‌ಐಆರ್ ಆದ ವಿದ್ಯಾರ್ಥಿ ಮುಖಂಡರ ಬಂಧನಕ್ಕೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ..

ಮೈಸೂರು,ಜ,10,2020(www.justkannada.in): ಮೈಸೂರು ವಿವಿಯಲ್ಲಿ ಫ್ರಿ ಕಾಶ್ಮೀರ ಪ್ಲೆಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಫ್‌ಐಆರ್ ಆದ ವಿದ್ಯಾರ್ಥಿ ಮುಖಂಡರನ್ನ  ಬಂಧಿಸುವಂತೆ  ಒತ್ತಾಯಿಸಿ ಎಬಿವಿಪಿ  ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಜೆಎಸ್‌ಎಸ್ ವಿದ್ಯಾಪೀಠ ವೃತ್ತದಲ್ಲಿ ವಿದ್ಯಾರ್ಥಿನಿಯರನ್ನು ಒಳಗೊಂಡು ಎಬಿವಿಪಿ ಬೃಹತ್ ಪ್ರತಿಭಟನೆ ನಡೆಸಿ ಎಫ್‌ಐಆರ್ ಆದ ವಿದ್ಯಾರ್ಥಿ ಮುಖಂಡರನ್ನ ಬಂಧಿಸುವಂತೆ ಒತ್ತಾಯಿಸಿತು.

ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ನಾಮಫಲಕ ಹಿಡಿದ ಘೋಷಣೆ ಮಾಡಿದರು. ವಿವಿಯಲ್ಲಿ ಫ್ರಿ ಕಾಶ್ಮೀರ ಭಿತ್ತಿಪತ್ರ ಹಿಡದ ವಿದ್ಯಾರ್ಥಿನಿ ಬಂಧನವಾಗಬೇಕು. ಎಫ್‌ಐಆರ್ ದಾಖಲಾಗಿರುವ ವಿದ್ಯಾರ್ಥಿ ಮುಖಂಡರನ್ನು ಕ್ಯಾಂಪಸ್‌ನಿಂದ ಹೊರ ಹಾಕಬೇಕು. ಕೂಡಲೇ ಅವರುಗಳನ್ನು ಬಂಧಿಸುವಂತೆ ಎಬಿವಿಪಿ ಸಂಚಾಲಕ ಗೌತಮ್ ಒತ್ತಾಯಿಸಿದರು.

Key words: Free Kashmir- Plecard -display case – ABVP -protests –demanding- arrest – FIR’-student leaders