Monday, August 3, 2026

BDA Apartments

Home Election News and Analysis ಕಾಂಗ್ರೆಸ್ ನ 20ರಿಂದ 25 ಶಾಸಕರು ಬಿಜೆಪಿಗೆ ಬರ್ತಾರೆ-ಕಲ್ಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್…

ಕಾಂಗ್ರೆಸ್ ನ 20ರಿಂದ 25 ಶಾಸಕರು ಬಿಜೆಪಿಗೆ ಬರ್ತಾರೆ-ಕಲ್ಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್…

ಕಲ್ಬುರ್ಗಿ,ಮೇ,22,2019(www.justkannada.in):  ಲೋಕಸಭೆ ಚುನಾವಣಾ ಫಲಿತಾಂಶ ಬಳಿಕ ಕಾಂಗ್ರೆಸ್ 20ರಿಂದ 25 ಶಾಸಕರು ಬಿಜೆಪಿಗೆ ಬರ್ತಾರೆ ಎಂದು ಕಲ್ಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದರು.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಉಮೇಶ್ ಜಾಧವ್,  ರೋಷನ್ ಬೇಗ್ ಈಗಾಗಲೇ ಸಮ್ಮಿಶ್ರ ಸರ್ಕಾರದ ವಿರುದ್ದ ಸಿಡಿದೆದ್ದಿದ್ದಾರೆ.  ರೋಷನ್ ಬೇಗ್ ಸೇರಿ 20 ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ. ಹಾಗೆಯೇ ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಇವಿಎಂಗಳ ದೋಷದ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ಅರ್ಥ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಸೋಲಲಿದೆ ಎಂಬುದು. ಹತಾಶೆಯಿಂದ  ಇವಿಎಂ ದೋಷದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಉಮೇಶ್ ಜಾಧವ್ ಲೇವಡಿ ಮಾಡಿದರು.

Key words: 20 congress legislators will join the BJP-umesh jadhav

#Politicalnews #umeshjadhav #kalburgi