Thursday, August 6, 2026

BDA Apartments

Home Front Page ರಣಜಿ ಕ್ರಿಕೆಟ್: ಇನ್ನಿಂಗ್ಸ್ ಮುನ್ನಡೆ ಗಳಿಸಿದ ಕರ್ನಾಟಕ

ರಣಜಿ ಕ್ರಿಕೆಟ್: ಇನ್ನಿಂಗ್ಸ್ ಮುನ್ನಡೆ ಗಳಿಸಿದ ಕರ್ನಾಟಕ

ಬೆಂಗಳೂರು, ಡಿಸೆಂಬರ್ 20, 2019 (www.justkannada.in): ರಣಜಿ ಪಂದ್ಯದಲ್ಲಿ ಕರ್ನಾಟಕಕ್ಕೆ ಮಹತ್ವದ ಇನ್ನಿಂಗ್ಸ್‌ ಮುನ್ನಡೆ ಪಡೆದಿದೆ.

ಶ್ರೇಯಸ್‌ ಗೋಪಾಲ್‌ ಮತ್ತು ಅಭಿಮನ್ಯು ಮಿಥುನ್‌ ಕೆಳ ಕ್ರಮಾಂಕದಲ್ಲಿ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ಉತ್ತರಪ್ರದೇಶ ವಿರುದ್ಧದ ಇನ್ನಿಂಗ್ಸ್ ಮುನ್ನಡೆ ತಂದು ಕೊಟ್ಟಿದ್ದಾರೆ.

ಯುಪಿಯ 281ಕ್ಕೆ ಉತ್ತರವಾಗಿ ಕರ್ನಾಟಕ 321 ರನ್‌ ಗಳಿಸಿದೆ. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಉತ್ತರಪ್ರದೇಶ 3ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 29 ರನ್‌ ಮಾಡಿದೆ. ಇಂದು ಅಂತಿಮ ದಿನವಾಗಿದ್ದು, ಪಂದ್ಯ ಸ್ಪಷ್ಟ ಫ‌ಲಿತಾಂಶ ಕಾಣುವ ಸಂಭವ ಕಡಿಮೆ.