Friday, August 21, 2026

BDA Apartments

Home Front Page ಕೆ.ಆರ್ ಮಾರ್ಕೆಟ್ ಫ್ಲೈ ಓವರ್ ಕಾಮಗಾರಿ ಹಿನ್ನೆಲೆ: ಒಂದು ಕಡೆ ಸಂಚಾರ ಮಾರ್ಗ ಬಂದ್…

ಕೆ.ಆರ್ ಮಾರ್ಕೆಟ್ ಫ್ಲೈ ಓವರ್ ಕಾಮಗಾರಿ ಹಿನ್ನೆಲೆ: ಒಂದು ಕಡೆ ಸಂಚಾರ ಮಾರ್ಗ ಬಂದ್…

ಬೆಂಗಳೂರು,ಡಿ,16,2019(www.justkannada.in):  ನಗರದ ಫ್ಲೈ ಓವರ್ ನಲ್ಲಿ ದುರಸ್ತಿ ಡಾಂಬರೀಕರಣ ಮಾಡುತ್ತಿರುವ ಹಿನ್ನೆಲೆ ಒಂದು ತಿಂಗಳ ಕಾಲ ಒಂದು ಕಡೆಯ ಸಂಚಾರ ಮಾರ್ಗವನ್ನ ಬಂದ್ ಮಾಡಲಾಗಿದೆ.

ನಗರದ ಕೆ.ಆರ್ ಮಾರ್ಕೆಟ್ ಫ್ಲೈ ಓವರ್ ರಸ್ತೆ ಗುಂಡಿ ಬಿದ್ದ ಹಿನ್ನೆಲೆ ದುರಸ್ತಿಗಾಗಿ ಆಗ್ರಹ ಕೇಳಿ ಬಂದಿತ್ತು. ಹೀಗಾಗಿ ಫ್ಲೈಓವರ್ ಕಾಮಗಾರಿಗೆ ನಡೆಸಲು ನಿರ್ಧರಿಸಿಲಾಗಿದ್ದು ಅದ್ದರಿಂದ ಒಂದು ಕಡೆ ಸಂಚಾರ ಮಾರ್ಗವನ್ನ ಬಂದ್ ಮಾಡಲಾಗಿದೆ.  ಮೈಸೂರು ಕಡೆಯಿಂದ ಟೌನ್ ಹಾಲ್ ಕಡೆಗೆ ಮತ್ತು ಟೌನ್ ಹಾಲ್ ಕಡೆಯಿಂದ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಪರ್ಯಾಯ ಮಾರ್ಗ ಅನುಸರಿಸುವಂತೆ ಸೂಚಿಸಲಾಗಿದೆ.

ಫ್ಲೈಓವರ್ ನಲ್ಲಿ ಒಂದು ಕಡೆಯ ಸಂಚಾರ ಬಂದ್ ಮಾಡಿರುವ ಹಿನ್ನೆಲೆ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ.  ಫ್ಲೈಓವರ್ ಮಾರ್ಗವಾಗಿ ಬರುವ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಒಂದು ತಿಂಗಳ ಕಾಲ ಕಾಮಗಾರಿ ಕಾರ್ಯ ನಡೆಯಲಿದ್ದು ಹೀಗಾಗಿ ಸವಾರರು ಬದಲಿ ಮಾರ್ಗದ ಕಡೆ ತೆರಳಬೇಕಿದೆ.

key words: bangalore- KR Market -Fly Over –work -One way- traffic -bandh