ನನಗೆ ಡಿಸಿಎಂ ಸ್ಥಾನ ನೀಡುವಂತೆ ಜನರ ಒತ್ತಾಯವಿದೆ-  ಸಚಿವ ಶ್ರೀರಾಮುಲು ಹೇಳಿಕೆ…

ಬೆಂಗಳೂರು,ಡಿ,16,2019(www.justkannada.in):  ನನಗೆ ಡಿಸಿಎಂ ಸ್ಥಾನ ನೀಡಬೇಕೆಂದು ಜನರ ಒತ್ತಾಯವಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ಇಂದು ಬಿಜೆಪಿ ಕಚೇರಿಯಲ್ಲಿ ಬಿ.ಎಲ್ ಸಂತೋಷ್ ಅವರನ್ನ ಸಚಿವ ಶ್ರೀರಾಮುಲು ಭೇಟಿಯಾಗಿ ಚರ್ಚಿಸಿದರು. ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಬಿಜೆಪಿಯಲ್ಲಿ ಸ್ಥಾನಕ್ಕಾಗಿ  ಹೋರಾಟ ಮಾಡಿದವರು ನಾವಲ್ಲ.  ಪಕ್ಷದ ಸಲುವಾಗಿ  ಕೆಲಸ ಮಾಡುತ್ತೇವೆ. ನನಗೆ ಡಿಸಿಎಂ ಸ್ಥಾನ ನೀಡಬೇಕೆಂದು ಜನರ ಒತ್ತಾಯವಿದೆ ಅದನ್ನ ನಾನು ಬೇಡ ಎನ್ನುವುದಿಲ್ಲ ಎಂದರು.

ಡಿಸಿಎಂ ಮಾಡಬೇಕು ಎಂಬುದು ಜನರ ಒತ್ತಾಯ. ಅವರಿಗೆ ನಾನು ಮುಜುಗರ ಮಾಡಲ್ಲ. ಪಕ್ಷದ ಸ್ಥಾನ-ಮಾನಕ್ಕೆ ನಾನು ಹೋರಾಟ ನಡೆಸಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಶ್ರೀರಾಮುಲು ಹೇಳಿದ್ದಾರೆ. ಡಿಸಿಎಂ ಹುದ್ದೆ ಆಕಾಂಕ್ಷಿಯಾಗಿರುವ ಶ್ರೀರಾಮುಲುಗೆ ಈ ಬಾರಿ ಕೂಡ ಈ ಸ್ಥಾನ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಿವೆ. ಒಂದು ವೇಳೆ ಶ್ರೀರಾಮುಲುಗೆ ಈ ಸ್ಥಾನ ಕೈ ತಪ್ಪಿದಲ್ಲಿ, ಬಿಜೆಪಿ ನೂತನ ಶಾಸಕರ ಪ್ರಭಾವ ಪಕ್ಷದಲ್ಲಿ ಹೆಚ್ಚಲಿದೆ.

Key words: People- insist -DCM –position-Minister- Sriramulu.