Tuesday, August 11, 2026

BDA Apartments

Home Cinema ಚೆಹರಾ ಸಿನಿಮಾದಲ್ಲಿ ಬಿಗ್ ಬಿ ಜತೆ ನಟಿಸಲು ಸಜ್ಜಾದ ಕೃತಿ ಕರಬಂಧ

ಚೆಹರಾ ಸಿನಿಮಾದಲ್ಲಿ ಬಿಗ್ ಬಿ ಜತೆ ನಟಿಸಲು ಸಜ್ಜಾದ ಕೃತಿ ಕರಬಂಧ

ಬೆಂಗಳೂರು:ಮೇ-20:(www.justkannada.in) ಸ್ಯಾಂಡಲ್ ವುಡ್ ನಟಿ ಕೃತಿ ಕರಬಂಧ ಬಾಲಿವುಡ್ ನಲ್ಲಿ ನೆಲೆಯೂರುತ್ತಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಕಾರಣ ಬಾಲಿವುಡ್ ನಲ್ಲಿ ಈಗಾಗಲೇ 6 ಚಿತ್ರಗಳನ್ನು ಮಾಡಿರುವ ಕೃತಿ, ಈಗ ಬಿಗ್ ಬಿ ಅಮಿತಾಬ್ ಬಚ್ಚನ್ ಜತೆ ನಟಿಸಲಿದ್ದಾರಂತೆ.

’ಚೆಹರಾ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಜತೆ ನಟಿಸುವ ಅವಕಾಶ ಪಡೆದಿದ್ದಾಗಿ ಸ್ವತ: ಕೃತಿ ಹೇಳಿದ್ದಾರೆ. ಅಮಿತಾಭ್ ಬಚ್ಚನ್ ಜೊತೆಗೆ ನಟಿಸುತ್ತಿರುವ ಕುರಿತು ಸಂತಸ ಹಂಚಿಕೊಂಡಿರುವ ಕೃತಿ, ‘ಚೆಹರಾ ನನ್ನ ಬಹುದಿನಗಳ ಕನಸಿನ ಚಿತ್ರ. ಅಮಿತಾಭ್ ಅವರಂಥ ಮಹಾನ್ ನಟರ ಜೊತೆಗೆ ನಟಿಸುತ್ತಿರುವುದು ನಿಜಕ್ಕೂ ಅದೃಷ್ಟದ ಸಂಗತಿ. ನನಗಂತೂ ನಂಬಿಕೆಯೇ ಬರುತ್ತಿಲ್ಲ. ‘ಚೆಹರಾ’ದ ಅವಕಾಶದಿಂದಾಗಿ ನನ್ನ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ. ಸೈಕಾಲಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾದ ಬಗ್ಗೆ ನನಗೆ ಬಹಳಷ್ಟು ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.

ಇನ್ನು ತಮಿಳು ಮತ್ತು ಮಲಯಾಳಂ ದ್ವಿಭಾಷೆಯಲ್ಲಿ ತಯಾರಾಗುತ್ತಿರುವ ದುಲ್ಕರ್ ಸಲ್ಮಾನ್ ಚಿತ್ರಕ್ಕೆ ಕೂಡ ಕೃತಿ ಆಯ್ಕೆಯಾಗಿದ್ದಾರಂತೆ. ಬಾಲಿವುಡ್ ಜರ್ನಿ ಬಗ್ಗೆ ಮಾತನಾಡಿರುವ ಕೃತಿ, ನನಗೆ ಬಾಲಿವುಡ್‌ನಿಂದ ಮುಂಚಿನಿಂದಲೂ ಅವಕಾಶಗಳಿದ್ದವು. ಆದರೆ, ದಕ್ಷಿಣದಲ್ಲಿ ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸುವತನಕ ಅತ್ತ ಹೋಗುವಂತಿರಲಿಲ್ಲ. ಈ ಮಧ್ಯೆ ತಮಿಳು ಸಿನಿಮಾವೊಂದರ ಚಿತ್ರೀಕರಣ ನಿಂತು ಹೋಗಿತ್ತು. ಆ ಬಿಡುವಿನಲ್ಲೇ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಾಜ್ ರೀಬೂಟ್’ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ಕೃತಿ, ಇದುವರೆಗೆ ಆರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದೂವರೆ ತಿಂಗಳ ಅಂತರದಲ್ಲಿ ‘ಪಾಗಲ್ ಪಂಥಿ’ ಮತ್ತು ‘ಹೌಸ್‌ಫುಲ್-4’ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಕೃತಿಗೆ ಸಂತಸ ತಂದಿದೆಯಂತೆ.

ಚೆಹರಾ ಸಿನಿಮಾದಲ್ಲಿ ಬಿಗ್ ಬಿ ಜತೆ ನಟಿಸಲು ಸಜ್ಜಾದ ಕೃತಿ ಕರಬಂಧ
Bollywood,kriti karabandha,amitabh bachchan,chehara