ಮೇ 24ರಂದು ಸಮ್ಮಿಶ್ರ ಸರ್ಕಾರ ಬೀಳುತ್ತೆ: ಬಿಎಸ್ ವೈ ಸಿಎಂ ಆಗ್ತಾರೆ- ಬಿಜೆಪಿ ಮುಖಂಡ ಉಮೇಶ್ ಜಾಧವ್ ವಿಶ್ವಾಸ…

ಕಲ್ಬುರ್ಗಿ,ಮೇ,20,2019(www.justkannada.in): ಮೇ 24ರಂದು ಸಮ್ಮಿಶ್ರ ಸರ್ಕಾರ ಪತನವಾಗುತ್ತೆ ನಂತರ ಬಿಎಸ್ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ಕಲ್ಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಉಮೇಶ್ ಜಾಧವ್, ಮತದಾನೋತ್ತರ ಸಮೀಕ್ಷೆಗೂ ಮೊದಲೇ ರಾಜ್ಯದಲ್ಲಿ ಬಿಜೆಪಿ 23 ಸ್ಥಾನ ಗೆಲ್ಲುತ್ತೆ ಅಂತ ಗೊತ್ತಿತ್ತು. ಮೇ 23ರಂದು ಫಲಿತಾಂಶ ಬರುತ್ತೆ. ಬಳಿಕ ಮೇ24ಕ್ಕೆ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದರು.

ಹಾಗೆಯೇ ಕಾಂಗ್ರೆಸ್ ನ ಹಲವು ಮಂದಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಉಮೇಶ್ ಜಾಧವ್ ತಿಳಿಸಿದರು.

Key words: The coalition government falls on May 24.next  BSY is the CM-Umesh Jadhav

#politicalnews #kalburgi #bjp #umeshjadhav