Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಸಿಎಂ ಆಗುವ ಹುಚ್ಚು ಎಂದಿದ್ದ ಕೆ.ಎಸ್ ಈಶ್ವರಪ್ಪಗೆ ತಿರುಗೇಟು: ಜೆಡಿಎಸ್ ಜತೆ ಮೈತ್ರಿ ಬಗ್ಗೆ ಸ್ಪಷ್ಟನೆ...

ಸಿಎಂ ಆಗುವ ಹುಚ್ಚು ಎಂದಿದ್ದ ಕೆ.ಎಸ್ ಈಶ್ವರಪ್ಪಗೆ ತಿರುಗೇಟು: ಜೆಡಿಎಸ್ ಜತೆ ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ….

ಹುಬ್ಬಳ್ಳಿ,ಡಿ,5,2019(www.justkannada.in):  ಸಿದ್ಧರಾಮಯ್ಯಗೆ ಸಿಎಂ ಆಗುವ ಹುಚ್ಚು ಎಂದು ಟೀಕಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ,ಸರ್ಕಾರ ರಚನೆ ಕುರಿತು ಹೇಳಿಕೆ ನೀಡಿಲ್ಲ  ನಾನು ಸಿಎಂ ಆಗ್ತೀನಿ ಎಂದು ಯಾವಾಗ ಹೇಳಿದ್ದೆ ಎಂದು ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ನಾನು ಬಹುಮತ ಬಂದ್ರೆ ಮಾತ್ರ ಸರ್ಕಾರ ರಚನೆ ಎಂದಿದ್ದೆ. ನಾನು ಸಿಎಂ ಆಗುವ ಬಗ್ಗೆ ಹೇಳಿಕೆ ನೀಡಿಲ್ಲ. ಬಿಜೆಪಿಯವರು ಬಾಯಿಗೆ ಬಂದತೆ ಮಾತನಾಡುತ್ತಿದ್ದಾರೆ. ಅವರು ಹಿಂಭಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಇನ್ನು ಜೆಡಿಎಸ್ ಜತೆ ಮತ್ತೆ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಜೆಡಿಎಸ್ ಜತೆ ಯಾವುದೇ ಮೈತ್ರಿ ಇಲ್ಲ. ಉಪಚುನಾವಣೆ ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

Key words: Former CM- Siddaramaiah – clarified- alliances – JDS-tong-minister-k.s eshwarappa