Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ ಬಾಬ್ ವಿಲ್ಲೀಸ್ ನಿಧನ

ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ ಬಾಬ್ ವಿಲ್ಲೀಸ್ ನಿಧನ

ಲಂಡನ್, ಡಿಸೆಂಬರ್ 05, 2019 (www.justkannada.in): ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ ಗಳಲ್ಲಿ ಒಬ್ಬರಾದ ಬಾಬ್ ವಿಲ್ಲೀಸ್ (Bob Willis) ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಬಾಬ್ ವಿಲ್ಲೀಸ್ ನಿಧನಕ್ಕೆ ಸಂಬಂಧಿಸಿದಂತೆ ಅವರ ಕುಟುಂಬ ಹೇಳಿಕೆ ಬಿಡುಗಡೆ ಮಾಡಿದ್ದು, ಸಾವಿನ ಸುದ್ದಿಯನ್ನು ಖಚಿತಪಡಿಸಿದೆ.

ಇಂಗ್ಲೆಂಡ್ ಪರ 90 ಟೆಸ್ಟ್ ಮತ್ತು 64 ಏಕದಿನ ಪಂದ್ಯಗಳನ್ನು ಆಡಿರುವ ಬಾಬ್ ವಿಲ್ಲೀಸ್ ಅವರನ್ನು 1981ರ ಆಯಷಸ್ ಸರಣಿಯ ನಾಯಕ ಎಂದು ಸ್ಮರಿಸಲಾಗುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 325 ಮತ್ತು ಏಕದಿನ 80 ವಿಕೆಟ್‌ಗಳನ್ನು ಅವರು ಪಡೆದಿದ್ದಾರೆ.