ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಆರೋಪ: ಮತಗಟ್ಟೆ ಸಿಬ್ಬಂದಿ ಸಸ್ಪೆಂಡ್…

ಬೆಳಗಾವಿ,ಡಿ,5,2019(www.justkannada.in):  ಇಂದು ರಾಜ್ಯದ  15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು  ಮತದಾರರು ತಮ್ಮಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಮಾಢಿದ ಆರೋಪದ ಮೇಲೆ ಮತಗಟ್ಟೆ ಸಿಬ್ಬಂದಿ ಯನ್ನ ಸಸ್ಪೆಂಡ್ ಮಾಡಿರುವ ಘಟನೆ  ಬೆಳಗಾವಿ ಜಿಲ್ಲೆ ಗೋಕಾಕ್ ಕ್ಷೇತ್ರದಲ್ಲಿ ನಡೆದಿದೆ.

ಗೋಕಾಕ್ ಕ್ಷೇತ್ರದ ಮತಗಟ್ಟೆ ಸಂಖ್ಯೆ 231ರ ಸಿಬ್ಬಂದಿ ಪ್ರಕಾಶ್ ವೀರಭದ್ರಪ್ಪ ಅಮಾನತುಗೊಂಡಿರುವುದು. ಮದ್ಯ ಸೇವಿಸಿ ಬಂದು ಚುನಾವಣಾ ಕರ್ತವ್ಯದಲ್ಲಿ ಅಡ್ಡಿಯನ್ನುಂಟು ಮಾಡಿದ ಆರೋಪದ ಮೇಲೆ ಬೆಳಗಾವಿ ಜಿಲ್ಲಾಧಿಕಾರಿ ಬಿ.ಎಸ್ ಬೊಮ್ಮನಹಳ್ಳಿ ಅವರು ಪ್ರಕಾಶ್ ವೀರಭದ್ರಪ್ಪರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Key words: gokak-by election-drink-f election duty-staff -suspend.