ಶಾಸಕ ಅನಿಲ್ ಚಿಕ್ಕಮಾದುಗೆ ಪೊಲೀಸರ ಅವಾಜ್ ಪ್ರಕರಣ: ಸಿದ್ಧರಾಮಯ್ಯ ಮಧ್ಯಪ್ರವೇಶ: ತಿರುವು ಪಡೆದುಕೊಂಡ ಹೈಡ್ರಾಮಾ….

0
431

ಮೈಸೂರು,ಡಿ,5,2019(www.justkannada.in): ಹುಣಸೂರು ಕ್ಷೇತ್ರ ಉಪಚುನಾವಣೆ ಹಿನ್ನೆಲೆ ಮತದಾನ ಮಾಡಲು ಬಂದ ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದುಗೆ ಪೊಲೀಸರು ಅವಾಜ್  ಹಾಕಿದ ಪ್ರಕರಣ ಗ್ರಾಮದಲ್ಲಿ ನಡೆದ ಹೈಡ್ರಾಮಾ ಇದೀಗ ತಿರುವು ಪಡೆದುಕೊಂಡಿದೆ.

ಹುಟ್ಟೂರು ಹೊಸರಾಮೇನಹಳ್ಳಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮತ ಚಲಾಯಿಸಿ ಮತಗಟ್ಟೆಯಿಂದ ಹೊರಬಂದು ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದ ವೇಳೆ   ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಮಾತಿನ ಚಕಮಕಿಗಿಳಿದು ಅವಾಜ್ ಹಾಕಿದ್ದರು. ಈ ಸಮಯದಲ್ಲಿ ಗ್ರಾಮಸ್ಥರು ಪೊಲೀಸರ ನಡೆಯನ್ನ ಖಂಡಿಸಿ ಗ್ರಾಮದ ಬೆಟ್ಟದ ಚಿಕ್ಕಮ್ಮ ದೇವಾಲಯದ ಮುಂದೆ ಪ್ರತಿಭಟನೆ ನಡೆಸಿ ಇನ್ಸ್ಪೆಕ್ಟರ್  ಸುನೀಲ್ ಕುಮಾರ್ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಶಾಸಕ ಅನಿಲ್ ಚಿಕ್ಕಮಾದು, ಅನಿಲ್ ತಾಯಿ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಸ್ಥಳಕ್ಕೆ ಬಂದ ಎಎಸ್ಪಿ ಸ್ನೇಹ ಅವರು ಗ್ರಾಮಸ್ಥರೊಡನೆ ಸಂಧಾನಕ್ಕೆ ಮುಂದಾಗಿದ್ದು ಗ್ರಾಮಸ್ಥರು ಸಂದಾನಕ್ಕೆ ಬಗ್ಗದೆ ಪ್ರತಿಭಟನೆ ಮುಂದುವರೆಸಿ ಇನ್ಸ್‌ ಪೆಕ್ಟರ್ ಕ್ಷಮೆ ಕೇಳುವಂತೆ ಪಟ್ಟ ಹಿಡಿದರು.

ಈ ಹೈಡ್ರಾಮಗಳ ನಡುವೆ ಗ್ರಾಮದಲ್ಲಿ ನಡೆದ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್  ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕರೆ ಮಾಡಿ ಗಮನಕ್ಕೆ ತಂದರು.  ಈ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ  ಎ.ಎಸ್.ಪಿ ಸ್ನೇಹ ಜೊತೆ ಮಾತನಾಡಿದ್ದು  ಎಎಸ್ ಪಿ ಸ್ನೇಹ ಅವರು ಸಿದ್ದರಾಮಯ್ಯಗೆ ವಾಸ್ತವ ಪರಿಸ್ಥಿತಿ ತಿಳಿಸಿದರು. ಬಳಿಕ ಶಾಸಕರು ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ  ಎಎಸ್ ಪಿ ಸ್ನೇಹ ಅವರು ಸಿದ್ಧರಾಮಯ್ಯಗೆ ಭರವಸೆ ನೀಡಿದರು.

ಇದಾದ ನಂತರ ಮಾಜಿ ಸಿಎಂ ಸಿದ್ಧರಾಮಯ್ಯ ವಿಜಯಕುಮಾರ್ ಜೊತೆ ಮಾತನಾಡಿ ಕೆಲ ಸೂಚನೆ ನೀಡಿದ್ದಾರೆ. ಬಳಿಕ   ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಇತರರು ಘಟನಾ ಸ್ಥಳದಿಂದ ನಿರ್ಗಮಿಸಿದ್ದು ಸದ್ಯ ಹೊಸರಾಮೇನಹಳ್ಳಿ ಸಹಜ ಸ್ಥಿತಿಗೆ ಮರಳಿದೆ.

Key words: hunsur-by-election-MLA-anil chikkamadu-police-clash- former cm- siddaramaiah