Monday, October 12, 2026

Dasara Wishes

Happy Dasara
Home Front Page ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ- ಮಾಜಿ ಸಂಸದ ವಿ.ಎಸ್ ಉಗ್ರಪ್ಪ ವಾಗ್ದಾಳಿ…

ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ- ಮಾಜಿ ಸಂಸದ ವಿ.ಎಸ್ ಉಗ್ರಪ್ಪ ವಾಗ್ದಾಳಿ…

ಬೆಂಗಳೂರು,ನ,15,2019(www.justkannada.in):  ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅಲ್ಲದೆ ಅವರಿಗೆ ಕೊಟ್ಟ ಭರವಸೆ ಈಡೇರಿಸುತ್ತಾರಂತೆ. ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ವಾಗ್ದಾಳಿನಡೆಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ವಿ.ಎಸ್ ಉಗ್ರಪ್ಪ, ಬಿಜೆಪಿಯವರು ನಮಗೂ ಅಪರೇಷನ್ ಕಮಲಗೂ ಸಂಬಂಧವಿಲ್ಲ ಎಂದ್ರು. ಹಾಗಾದ್ರೆ ಈಗ ಮಾಡುತ್ತಿರುವುದು ಏನು. ಅನರ್ಹ ಶಾಸಕರಿಗೆ ಕೊಟ್ಟ ಭರವಸೆಯನ್ನ ಈಡೇರಿಸುತ್ತಾರಂತೆ. ಆಗಾದ್ರೆ ಸಿಎಂ ಬಿಎಸ್ ವೈ ಈವರೆಗೆ ಸುಳ್ಳು ಹೇಳಿದ್ರಾ. ಸುಳ್ಳು ಹೇಳಿದ ಬಿಎಸ್ ವೈ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.

ಸ್ಥಳೀಯ ಸಂಸ್ಥೆಗಳ 418 ವಾರ್ಡ್ ಗಳಿಗೆ ಚುನಾವಣೆ ನಡೆಯಿತು.  418 ವಾರ್ಡ್ ಗಳ ಪೈಕಿ ಕಾಂಗ್ರೆಸ್ 151 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ.  ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ ಎಂದು ವಿ.ಎಸ್ ಉಗ್ರಪ್ಪ ಹರಿಹಾಯ್ದರು.

Key words: BJP -morally –bankrupt- Former MP- VS Ugrappa