ಸಿದ್ಧರಾಮಯ್ಯ ದರ್ಪದ ಲೀಡರ್: ನಿಷ್ಠಾವಂತರಿಗೆ ಕಾಂಗ್ರೆಸ್ ನಲ್ಲಿ ಬೆಲೆ ಇಲ್ಲ- ರಮೇಶ್ ಜಾರಕಿಹೊಳಿ ಕಿಡಿ…

ಬೆಳಗಾವಿ,ನ,16,2019(www.justkannada.in):  ಸಿದ್ಧರಾಮಯ್ಯ ದರ್ಪದ ಲೀಡರ್ ಆಗಿದ್ದಾರೆ. ಅವರು ಬ್ಲಾಕ್ ಮೇಲ್ ಮಾಡಿ ಸಿಎಂ ಆಗಿದ್ದರು ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕಿಡಿಕಾರಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಲ್ಲಿ ಮಾಸ್ ಲೀಡರ್ ಗೆ ಬೆಲೆ ಇಲ್ಲ.  ಬಾಗಲಲ್ಲಿ ಬ್ಯಾಗ್ ಹಿಡಿದು ನಿಂತವರು ಮಾತ್ರ ಲೀಡರ್ ಆಗ್ತಾರೆ. ಕಾಂಗ್ರೆಸ್ ನಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ. ಕಾಂಗ್ರೆಸ್ ಸಿದ್ಧರಾಮಯ್ಯರ ಕಪಿಮುಷ್ಠಿಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ಧರಾಮಯ್ಯ ದರ್ಪದ ಲೀಡರ್, ಡಿ.ಕೆ ಶಿವಕುಮಾರ್ ಪೋಸ್ ಕೊಡೊ ಲೀಡರ್, ಮಲ್ಲಿಕಾರ್ಜುನ ಖರ್ಗೆ ಬ್ಲಾಕ್ ಮೇಲೆ ಮಾಡಲ್ಲ. ಧೈರ್ಯನೂ ಮಾಡಲ್ಲ. ಪಕ್ಷದಲ್ಲಿ ಏನೇ ಆದ್ರೂ ಖರ್ಗೆ ನೋಡಲ್ಲ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹರಿಹಾಯ್ದರು.

Key words: Siddaramaiah-Loyalists – no – Congress-disqualified MLA-Ramesh Jarakiiholi