Sunday, September 13, 2026

BDA Apartments

Home Front Page ಎಟಿಪಿ ಡಬಲ್ಸ್‌ ಶ್ರೇಯಾಂಕ: 19 ವರ್ಷಗಳ ಬಳಿಕ 100ರ ಪಟ್ಟಿಯಿಂದ ಲಿಯಾಂಡರ್ ಪೇಸ್ ಔಟ್ !

ಎಟಿಪಿ ಡಬಲ್ಸ್‌ ಶ್ರೇಯಾಂಕ: 19 ವರ್ಷಗಳ ಬಳಿಕ 100ರ ಪಟ್ಟಿಯಿಂದ ಲಿಯಾಂಡರ್ ಪೇಸ್ ಔಟ್ !

ನವದೆಹಲಿ, ನವೆಂಬರ್ 12, 2019 (www.justkannada.in): 19 ವರ್ಷಗಳ ಬಳಿಕ ಇದೇ ಮೊದಲ ಬಾರಿ ಭಾರತದ ಟೆನಿಸ್ ಪುರುಷರ ಡಬಲ್ಸ್‌ ಆಟಗಾರ ಲಿಯಾಂಡರ್ ಪೇಸ್ ಅವರು ಎಟಿಪಿ ಡಬಲ್ಸ್‌ ಶ್ರೇಯಾಂಕದ ಅಗ್ರ 100ರ ಪಟ್ಟಿಯಿಂದ ಹೊರ ಬಂದಿದ್ದಾರೆ.

ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಲಿಯಾಂಡರ್ ಪೇಸ್ ಐದು ಸ್ಥಾನಗಳಲ್ಲಿ ಕುಸಿದು 101ನೇ ಶ್ರೇಯಾಂಕಕ್ಕೆ ತೃಪ್ತಿಪಟ್ಟಿದ್ದಾರೆ. ತನ್ನ ಖಾತೆಯಲ್ಲಿ 856 ಅಂಕಗಳನ್ನು ಹೊಂದಿರುವ ಪೇಸ್, ಭಾರತದ ನಾಲ್ಕನೇ ಸ್ಥಾನದ ಆಟಗಾರ ಎಂದೆನಿಸಿಕೊಂಡಿದ್ದಾರೆ.

ರೋಹನ್ ಬೋಪಣ್ಣ(38), ದಿವಿಜ್ ಶರಣ್(46) ಹಾಗೂ ಪುರವ್ ರಾಜಾ ಅಗ್ರ 100ಕ್ಕೆ ಲಗ್ಗೆ ಇಟ್ಟಿದ್ದು, 93ನೇ ಸ್ಥಾನ ಪಡೆದುಕೊಂಡಿದ್ದಾರೆ. 46ರ ಪ್ರಾಯದ ಲಿಯಾಂಡರ್ ಪೇಸ್ ಅವರು 2000 ಇಸವಿಯ ಅಕ್ಟೋಬರ್ ನಲ್ಲಿ 100ರಿಂದ ಹೊರ ನಡೆದು 118ನೇ ಸ್ಥಾನ ಪಡೆದುಕೊಂಡಿದ್ದರು.