Saturday, September 12, 2026

BDA Apartments

ಶಾಸಕ ಜಿ.ಟಿ ದೆವೇಗೌಡರ ಸ್ವಗ್ರಾಮದ ದೇವಸ್ಥಾನದಲ್ಲಿ ಕಳ್ಳರ ಕೈ ಚಳಕ: ಹುಂಡಿ ಹಣ ...
Home Crime ಶಾಸಕ ಜಿ.ಟಿ ದೆವೇಗೌಡರ ಸ್ವಗ್ರಾಮದ ದೇವಸ್ಥಾನದಲ್ಲಿ ಕಳ್ಳರ ಕೈ ಚಳಕ: ಹುಂಡಿ ಹಣ ದೋಚಿ ಪರಾರಿ….

ಶಾಸಕ ಜಿ.ಟಿ ದೆವೇಗೌಡರ ಸ್ವಗ್ರಾಮದ ದೇವಸ್ಥಾನದಲ್ಲಿ ಕಳ್ಳರ ಕೈ ಚಳಕ: ಹುಂಡಿ ಹಣ ದೋಚಿ ಪರಾರಿ….

ಮೈಸೂರು,ನ,12,2019(www.justkannada.in): ಶಾಸಕ‌ ಜಿ.ಟಿ ದೇವೇಗೌಡರ ಸ್ವಗ್ರಾಮದಲ್ಲಿ ದೇವಸ್ಥಾನದಲ್ಲಿ  ಕಳ್ಳರು ಕೈಚಳಕ ತೋರಿದ್ದು ದೇವಸ್ಥಾನದಲ್ಲಿದ್ದ ಹುಂಡಿಯ ಹಣವನ್ನ ದೋಚಿ ಪರಾರಿಯಾಗಿದ್ದಾರೆ.

ಮೈಸೂರು ತಾಲೂಕು ಗುಂಗ್ರಾಲ್ ಛತ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿರುವ ಈಶ್ವರ ದೇವಾಲಯದಲ್ಲಿನ ಹುಂಡಿ ಹಣವನ್ನ ಖದೀಮರು ದೋಚಿದ್ದಾರೆ.  ಕಳದ ಮೂರು ವರ್ಷಗಳಿಂದ ಸಂಗ್ರಹವಾಗಿದ್ದ ಹುಂಡಿ‌ ಹಣ ಇದೀಗ ಕಳ್ಳರ ಪಾಲಾಗಿದೆ.

15 ದಿನಗಳ ಹಿಂದೆ ಇದೇ ಗ್ರಾಮದ ಬಾರ್ ಒಂದರಲ್ಲಿ‌ ಕಳ್ಳತನ ನಡೆದಿತ್ತು. ಇದೀಗ ರಾತ್ರಿ ಊರ ಒಳಗೆ ಇರುವ ಈಶ್ವರನ ದೇವಾಲಯದಲ್ಲಿ  ಕಳ್ಳತನ ನಡೆದಿದೆ. ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Robbery -temple -MLA -GT Deve Gowda’s-village-mysore