ರಿಯಲ್ ಸ್ಟಾರ್ ಕೈಗೆ ಕೋವಿ ಕೊಟ್ಟ ಆರ್.ಚಂದ್ರು !

ಬೆಂಗಳೂರು, ನವೆಂಬರ್ 12, 2019 (www.justkannada.in): ರೌಡಿಸಂನ ಮತ್ತೊಂದು ಆಯಾಮವನ್ನು ತೋರಿಸಲು ನಿರ್ದೇಶಕ ಆರ್.ಚಂದ್ರು ‘ಡಾನ್’ ಉಪೇಂದ್ರ ಕೈಯಲ್ಲಿ ಕೋವಿ ಕೊಟ್ಟಿದ್ದಾರೆ.

ಹೌದು. ನಿರ್ದೇಶಕ ಆರ್.ಚಂದ್ರು ಇದೀಗ ‘ಕಬ್ಜ’ ರೆಡಿ ಮಾಡಲು ಹೊರಟಿದ್ದಾರೆ. ‘ಕಬ್ಜ’ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಆದರೆ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕಬ್ಜ’ ಚಿತ್ರ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ಡಾನ್ ಒಬ್ಬನ್ನ ಬದುಕಿನ ಕಥೆಯೇ ‘ಕಬ್ಜ’ ಚಿತ್ರದ ಸ್ಟೋರಿ ಲೈನ್. 80 ರ ದಶಕದ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಉಪೇಂದ್ರ ಕೈಯಲ್ಲಿ ಲಾಂಗು, ಮಚ್ಚು ಬದಲು ಗನ್ ನೀಡಿದ್ದಾರೆ ನಿರ್ದೇಶಕ.