ಇಂದು ಶಿವಣ್ಣನ ‘ಆಯುಷ್ಮಾನ್’ಭವ’ ಸಾಂಗ್ ರಿಲೀಸ್ !

ಬೆಂಗಳೂರು, ನವೆಂಬರ್ 12, 2019 (www.justkannada.in): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾದ ಹಾಡೊಂದು ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗುತ್ತಿದೆ.

ಈ ಹಾಡು ತುಳು ಭಾಷೆಯ ಸಾಲಿನಿಂದ ಆರಂಭವಾಗುತ್ತಿರುವುದು ವಿಶೇಷ. ‘ತೆಂಬರೆ ಬೊಟ್ಟುವನಾ’ ಎಂದು ತುಳು ಭಾಷೆಯಲ್ಲಿ ಆರಂಭವಾಗುವ ಸಾಲು ಈ ಹಾಡಿನಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ನವಂಬರ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇದು ಗುರುಕಿರಣ್ ಪಾಲಿಗೆ 100 ನೇ ಸಂಗೀತ ನಿರ್ದೇಶನದ ಸಿನಿಮಾವಾಗಿದ್ದು, ಇದಕ್ಕಾಗಿ ತಮ್ಮ ಮಾತೃಭಾಷೆ ತುಳುವಿಗೆ ಗೌರವ ಸಲ್ಲಿಸುತ್ತಿದ್ದಾರೆ. ಈ ಹಾಡಿನ ಬಗ್ಗೆ ಕುತೂಹಲವಿದ್ದರೆ ಇಂದು ಸಂಜೆಯವರೆಗೆ ಕಾಯಲೇಬೇಕು.