Monday, November 9, 2026

Dasara Wishes

Happy Dasara
Home Front Page ಭ್ರಷ್ಟಾಚಾರ ಆರೋಪ: ಹೆಚ್ ಡಿಕೆ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದ್ದಾರೆ- ಸಚಿವ ಶಿವಲಿಂಗೇಗೌಡ

ಭ್ರಷ್ಟಾಚಾರ ಆರೋಪ: ಹೆಚ್ ಡಿಕೆ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದ್ದಾರೆ- ಸಚಿವ ಶಿವಲಿಂಗೇಗೌಡ

ಭ್ರಷ್ಟಾಚಾರ ಆರೋಪ: ಹೆಚ್ ಡಿಕೆ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದ್ದಾರೆ- ಸಚಿವ ಶಿವಲಿಂಗೇಗೌಡ

ಹಾಸನ,ನವೆಂಬರ್,9,2026 (www.justkannada.in):  ಹಾಸನ ಡಿಸಿ ಮತ್ತು ತಮ್ಮ ವಿರುದ್ದ ಭ್ರಷ್ಠಾಚಾರ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಅಬಕಾರಿ ಸಚಿವ ಶಿವಲಿಂಗೇಗೌಡರು  ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಶಿವಲಿಂಗೇಗೌಡ, ಕುಮಾರಸ್ವಾಮಿ ಒಂದು ಸಂಭಾಷಣೆಯ ಪ್ರತಿ ಬಿಡುಗಡೆ ಮಾಡಿದ್ದಾರೆ. ಇನ್ನೊಬ್ಬರು ಮಾತಾಡಿರುವ ವ್ಯಕ್ತಿ ಯಾರು ಅನ್ನೋದು ಅಲ್ಲಿ ಕಾಣಲ್ಲ. ಎಐ ಯುಗದಲ್ಲಿ ಯಾರನ್ನು ಬೇಕಾದರೂ ಬಿತ್ತರಿಸುವುದನ್ನು ನೋಡಿದ್ದೇವೆ. ಹೆಚ್ ಡಿಕೆ ಆಧಾರ ಇಲ್ಲದೆ ಎಐ ಚಾಟ್ ಬಗ್ಗೆ ಹೇಳಿದ್ದಾರೆ.  ಯಾರ ಯಾರ ಜತೆ ಮಾತನಾಡಿದ್ದರೆಂದು ಹೇಳಿದ್ದರೇ ಘನತೆ ಬರೋದು.  ತಂದು ಕೊಟ್ಟವರು ಯಾರು ಎಂದು ಕುಮಾರಸ್ವಾಮಿ ಧೈರ್ಯವಾಗಿ ಹೇಳಲಿ.  ಈ ಚಾಟ್ ಎಫ್ ಎಸ್ ಎಲ್ ಗೆ ಹೋಗುತ್ತೆ. ಸತ್ಯ ಗೊತ್ತಾದಾಗ ನಿಮ್ಮ ಗೌರವ ಏನಾಗುತ್ತೆ. ಹೆಚ್ ಡಿಕೆ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದ್ದಾರೆ ಎಂದು ಕುಟುಕಿದರು.ನಾನು ಹಳ್ಳಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ- ಪ್ರಿಯಾಂಕ್ ಖರ್ಗೆಗೆ HDK ತಿರುಗೇಟು

ನಾನು ಘೋರ ಅಪರಾಧ ಮಾಡಿದ್ದರೇ ಸಚಿವ ಸ್ಥಾನದಿಂದ ತೆಗೆಸಿ ಹಾಕಿ.  ನಿಮ್ಮ ಬಳೀ 20 ವರ್ಷ ಇದ್ದೆ ಇದು ನಿಮ್ಮ ಮನಸ್ಸಿಗೆ ಒಪ್ಪುತ್ತಾ? ಶಿವಲಿಂಗೇಗೌಡ ಸಚಿವ ಆಗಿದ್ದಾನೆ ಎಂದು ಹೀಗೆ ಮಾಡುತ್ತೀರಲ್ಲಾ  ಯಾರ ಬಳಿಯಾದರೂ ಲಂಚ ತೆಗೆದುಕೊಂಡಿದ್ದನ್ನ ತೋರಿಸುತ್ತೀರಾ?  ಶಶಿಕಿರಣ ಪೊಲೀಸರಿಗೆ ದೂರು ಕೊಟ್ಟು ಎಫ್ ಐಆರ್ ಮಾಡಿಸಿದ್ದಾನೆ. ಡಿಸಿ ಪಿಎ ಶಶಿಕಿರಣ್ ತನ್ನ ಮೊಬೈಲ್ ಸರೆಂಡರ್ ಮಾಡಿ ಬಂದಿದ್ದಾನೆ.  ಆ ಚಾಟ್ ನನ್ನದೇ ಆಗಿದ್ದರೇ ಶಿಕ್ಷೆಗೆ ಗುರಿಯಾಗುತ್ತೇನೆಂದು ಹೇಳಿದ್ದಾನೆ ಎಂದರು. ಭ್ರಷ್ಟಾಚಾರ ಆರೋಪ: ಹೆಚ್ ಡಿಕೆ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದ್ದಾರೆ- ಸಚಿವ ಶಿವಲಿಂಗೇಗೌಡ

ಬಡವರ ಮಕ್ಕಳು ಹೇಗೋ ದಡ ಸೇರಿದ್ದೀವಿ. ಏಕೆ ತೊಂದರೆ ಕೊಡ್ತೀರ?  ನನಗೆ ಮಾನಸಿಕವಾಗಿ ಅಘಾತವಾಗಿದೆ.  ಕೇಂದ್ರದ ಮಂತ್ರಿಯಾಗಿ ಇಂತಹ ಚಾಟ್ ಬಿಡುಗಡೆ  ಮಾಡುತ್ತೀರಲ್ಲ ನನ್ನ ವಿರುದ್ದದ ಆರೋಪ ಸಾಬೀತಾದರೇ ನಾನು ಶಿಕ್ಷೆ ಅನುಭವಿಸುತ್ತೇನೆ. ಇದು ಸುಳ್ಳು ಎಂದಾದರೇ ನನ್ನ ಮಾನಹಾನಿಗೆ ಬೆಲೆ ಕಟ್ಟೋರು ಯಾರು? ಎಂದು ಗುಡುಗಿದರು.Allegations jk02_new jk02 new

Corruption, Allegations, HDK hit-and-run’ case, Minister, Shivalinge Gowda

English Summary
Title

H.D. Kumaraswamy Alleges ₹75 Lakh Bribery Scam Involving Minister Shivalinge Gowda

Short Description
Union Minister H.D. Kumaraswamy has leveled major corruption allegations against Karnataka Minister K.M. Shivalinge Gowda and Hassan DC K.S. Lathakumari. Kumaraswamy leaked WhatsApp chats exposing an alleged bribery racket demanding ₹60 lakh for stone-crusher licenses. He further claimed the DC paid ₹70–75 lakh to Minister Shivalinge Gowda to illegally retain her official post. While both the Minister and the Hassan DC have strongly denied the extortion charges, Chief Minister D.K. Shivakumar dismissed the controversy as politically motivated. This explosive political row intensifies ongoing corruption debates surrounding the Karnataka government.
Keywords
Corruption, Allegations, HDK hit-and-run' case, Minister, Shivalinge Gowda