ಬೆಂಗಳೂರು,ನವೆಂಬರ್,7,2026 (www.justkannada.in): ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಬೆನ್ನು ನೋವುಗೆ ಫಿಸಿಯೋಥೆರಪಿ ಚಿಕಿತ್ಸೆಗಾಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ಪುರಸ್ಕರಿಸಿದೆ.
ಜೈಲಿನಲ್ಲಿರುವ ನಟ ದರ್ಶನ್ ತಮಗೆ ಮತ್ತೆ ಬೆನ್ನು ನೋವು ಶುರುವಾಗಿದ್ದು ಅಗತ್ಯ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ಮೂರು ದಿನಗಳಿಂದಲೂ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಇಂದು ಅರ್ಜಿಯ ಕುರಿತು ಆದೇಶ ಹೊರಡಿಸಿದೆ.
ನಟ ದರ್ಶನ್ ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ದರ್ಶನ್ ಅವರು ಫಿಸಿಯೋಥೆರಪಿಗಾಗಿ ಹೊರಗಿನ ಆಸ್ಪತ್ರೆ ಮೂಲಕ ಅಲ್ಲದೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಅನುಮತಿಯನ್ನು ನೀಡಲಾಗಿದೆ. ಫಿಸಿಯೋಥೆರಪಿ ಹಾಗೂ ಬೆನ್ನು ನೋವಿಗೆ ಸಂಬಂಧಿಸಿದ ಇತರೆ ಚಿಕಿತ್ಸೆಗಳನ್ನು ಸಹ ದರ್ಶನ್ ಅವರು ಜೈಲಿನ ಆವರಣದಲ್ಲಿಯೇ ಪಡೆಯಬಹುದಾಗಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಜೈಲಧಿಕಾರಿಗಳಿಗೆ ಸೂಚನೆ ನೀಡಿದೆ.
Court, permission, medical treatment, accused, actor, Darshan, jail






