Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Crime ಮದುವೆಯಾಗಿ ಮಕ್ಕಳಿದ್ರೂ ಬೇರೊಬ್ಬನ ಜೊತೆ ಲವ್: ರೈಲಿಗೆ ಸಿಲುಕಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಮದುವೆಯಾಗಿ ಮಕ್ಕಳಿದ್ರೂ ಬೇರೊಬ್ಬನ ಜೊತೆ ಲವ್: ರೈಲಿಗೆ ಸಿಲುಕಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಕೆಲಸದಿಂದ ವಜಾ ಮಾಡಿದ್ದಕ್ಕೆ ಮನನೊಂದು ಚಾಲಕ ಆತ್ಮಹತ್ಯೆ

ಮಂಡ್ಯ,ನವೆಂಬರ್,6,2026 (www.justkannada.in): ಮದುವೆಯಾಗಿ ಮಕ್ಕಳಿದ್ದರೂ ಪರಪುರುಷನ ಜೊತೆ ಲವ್ ನಲ್ಲಿ ಬಿದ್ದ ವಿವಾಹಿತೆ ತನ್ನ ಪ್ರಿಯಕರನ ಜೊತೆ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಇಂಡುವಾಳು ಬಳಿಯದ ಹೊರ ವಲಯದಲ್ಲಿ ನಡೆದಿದೆ.

ಬೆಂಗಳೂರು ಮೂಲದ ಸಹನಾ(25) ಮತ್ತು ರಾಹುಲ್(23) ಆತ್ಮಹತ್ಯೆಗೆ ಶರಣಾದವರು. ಸಹನಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ  ರಾಹುಲ್ ಜೊತೆ ಲವ್ ನಲ್ಲಿ ಬಿದ್ದಿದ್ದಳು. 8 ವರ್ಷದ ಹಿಂದೆ ಪ್ರೀತಿಸಿ ವೀರೇಶ್​ನನ್ನು ಸಹನಾ ವಿವಾಹವಾಗಿದ್ದಳು. ದಂಪತಿಗೆ 6 ವರ್ಷದ ಹೆಣ್ಣು ಮತ್ತು 2 ವರ್ಷದ ಗಂಡು ಮಗುವಿದೆ. ವೀರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ. ಕಳೆದ ಎರಡ್ಮೂರು ವರ್ಷಗಳಿಂದ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. ದಂಪತಿ ಇದ್ದ ಕಟ್ಟಡದಲ್ಲೇ ರಾಹುಲ್​​ ಕೂಡ ವಾಸವಿದ್ದ.married women death death 1

ಈ ವೇಳೆ ರಾಹುಲ್ ಮತ್ತು ಸಹನಾ ಪ್ರೀತಿಸಿದ್ದು, ಹೀಗಾಗಿ ಪ್ರೀತಿ ವಿಚಾರಕ್ಕೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಇಬ್ಬರ ಶವಗಳನ್ನು ರವಾನೆ ಮಾಡಲಾಗಿದೆ. ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.married women jk02_new jk02 new

 

English Summary
Title

Bengaluru Married Woman and Lover Die Under Train in Mandya

Short Description
A tragic incident unfolded near Mandya, Karnataka, where a married woman from Bengaluru and her lover allegedly died by suicide after jumping in front of a moving train. The deceased have been identified as 25-year-old Sahana, a mother of two, and 30-year-old Rahul, a Mandya native. The Mandya Railway Police recovered the bodies near Induvalu and shifted them to MIMS Hospital for post-mortem. A formal case has been registered, and local authorities are currently investigating the circumstances surrounding the couples' sudden and tragic deaths.
Keywords
married women, lover, commits, suicide, train, Mandya