Monday, November 2, 2026

Dasara Wishes

Happy Dasara
Home Front Page ಈ ನೆಲದಲ್ಲಿರುವವರು ಈ ಭೂಮಿಗೆ ಗೌರವ ನೀಡಬೇಕು: ಸಿಎಂ ಡಿ.ಕೆ ಶಿವಕುಮಾರ್

ಈ ನೆಲದಲ್ಲಿರುವವರು ಈ ಭೂಮಿಗೆ ಗೌರವ ನೀಡಬೇಕು: ಸಿಎಂ ಡಿ.ಕೆ ಶಿವಕುಮಾರ್

ಈ ನೆಲದಲ್ಲಿರುವವರು ಈ ಭೂಮಿಗೆ ಗೌರವ ನೀಡಬೇಕು: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ನವೆಂಬರ್,2,2026 (www.justkannada.in): “ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಇಲ್ಲಿನ ಕಾನೂನು ಮತ್ತು ನೆಲದ ಗೌರವವನ್ನು ಕಾಪಾಡಬೇಕು. ನಮ್ಮ ಭೂಮಿಯಲ್ಲಿ ಇದ್ದ ಮೇಲೆ ನಮ್ಮ ಭೂಮಿಗೆ ಗೌರವ ಕೊಡಬೇಕು. ಕಾನೂನು ಎಲ್ಲರಿಗೂ ಒಂದೇ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ನಗರದ ವಿವಿಧ ಕಡೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಕರಾಳ ದಿನಾಚರಣೆ ಆಚರಿಸಿರುವ ಕುರಿತು ಕೇಳಿದಾಗ, “ಕನ್ನಡಿಗರು ಹಾಗೂ ಮರಾಠಿಗರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಇಲ್ಲಿನ ಗೌರವವನ್ನು ಕಾಪಾಡಬೇಕು” ಎಂದರು.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ನೈತಿಕ ಪೊಲೀಸ್ ಗಿರಿ ಮಾಡಬೇಡಿ

“ಯಾವುದೇ ಕನ್ನಡಪರ ಸಂಘಟನೆಗಳು, ಐಟಿ ಸಂಸ್ಥೆಗಳ ಮೇಲೆ ದಾಳಿ ಮಾಡಲು ಹೋಗಬಾರದು. ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ನೈತಿಕ ಪೊಲೀಸ್ ಗಿರಿ ನಡೆಸಲು ಅವಕಾಶವಿಲ್ಲ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದೆ. ಯಾವುದೇ ದೂರು ಅಥವಾ ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತನ್ನಿ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ” ಎಂದು ತಿಳಿಸಿದರು.

ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ಪಡೆಯಲು ಸೂಚನೆ

ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಅವರು, “ನಿಮ್ಮ ಮೇಲಿರುವ ಪ್ರಕರಣಗಳನ್ನೆಲ್ಲ ವಾಪಸ್ ಪಡೆಯಬೇಕು ಎಂದು ಈಗಾಗಲೇ ಸೂಚನೆ ನೀಡಿದ್ದೇನೆ. ಈ ಸಂಬಂಧ ಕಡತಗಳು ಸಿದ್ಧವಾಗುತ್ತಿವೆ. ಇಂತಹ ಪ್ರಕರಣಗಳಿಂದ ಹೋರಾಟಗಾರರಿಗೆ ಮುಕ್ತಿ ನೀಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಇಂತಹ ಸಂದರ್ಭದಲ್ಲಿ ನೀವು ಮತ್ತೆ ಈ ರೀತಿ ಮಾಡಿದರೆ ಪೊಲೀಸರು ಪ್ರಕರಣ ವಾಪಸ್ ಪಡೆಯಲು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಹೀಗಾಗಿ ದಯವಿಟ್ಟು ಕಾನೂನು ಕೈಗೆತ್ತಿಕೊಳ್ಳದೆ ಸರ್ಕಾರಕ್ಕೆ ಸಹಕಾರ ನೀಡಿ” ಎಂದು ಮನವಿ ಮಾಡಿದರು.

“ಕನ್ನಡ ಭಾಷೆ, ಕರ್ನಾಟಕದ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಈ ಜವಾಬ್ದಾರಿಯನ್ನು ಸರ್ಕಾರವೇ ನಿರ್ವಹಿಸಲಿದೆ. ಹೀಗಾಗಿ ಯಾರೂ ಕಾನೂನು ಉಲ್ಲಂಘಿಸುವ ಮೂಲಕ ಸಮಸ್ಯೆ ಸೃಷ್ಟಿಸಬಾರದು” ಎಂದು ಹೇಳಿದರು.

ಮತದಾರರ ಹಕ್ಕುಗಳನ್ನು ರಕ್ಷಿಸಲು ಕಾಂಗ್ರೆಸ್ ಬದ್ಧ

ದೆಹಲಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಕೇಳಿದಾಗ, “ಮತದಾನದ ಹಕ್ಕು ಎಂದರೆ ಅದು ಬದುಕುವ ಹಕ್ಕಿದ್ದಂತೆ. ಆದರೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಲಕ್ಷಾಂತರ ಜನರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದೆ. ದೇಶದ ಪ್ರತಿಯೊಬ್ಬ ಮತದಾರರಿಗೆ ಮತದಾನದ ಹಕ್ಕು ನೀಡುವುದು ನಮ್ಮ  ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಲು ಶ್ರಮಿಸುತ್ತಿರುವ ಪಕ್ಷವು ಪ್ರತಿ ಮತದಾರರ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ. ಪ್ರಸ್ತುತ ಹಮ್ಮಿಕೊಳ್ಳಲಾಗಿರುವ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆ ಯಶಸ್ವಿಯಾಗಲಿದೆ.ಪ್ರತಿಯೊಬ್ಬ ಮತದಾರರ ಹಕ್ಕನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದರು.must dk shivakumar-dks dk shivakumar dks

“ಕರ್ನಾಟಕದಲ್ಲಿ ಯಾವ ರೀತಿಯಲ್ಲಿ ಅಕ್ರಮಗಳನ್ನು ಸೃಷ್ಟಿಸಲಾಯಿತು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಲಕ್ಷಾಂತರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಹೆಸರನ್ನು ಮತ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.respect this land jk02_new jk02 new

must, respect this land, CM, D.K. Shivakumar

English Summary
Title

Kannada Rajyotsava: Everyone Living in Karnataka Must Respect the Land, Says CM D.K. Shivakumar

Short Description
During the 71st Kannada Rajyotsava, Karnataka Deputy CM D.K. Shivakumar emphasized that everyone living in the state must respect its land, language, and culture. Speaking in Bengaluru, he announced that the government is drafting a legal framework to accord official status to the yellow-and-red Kannada flag. The proposed guidelines will govern its display alongside the national tricolour, with plans to pass a resolution in the upcoming Belagavi assembly session. While making the flag hoisting mandatory for schools and government offices, he urged pro-Kannada activists to maintain peace and avoid taking the law into their own hands.
Keywords
must, respect this land, CM, D.K. Shivakumar