Thursday, October 29, 2026

Dasara Wishes

Happy Dasara
Home Cinema ಸಿನಿಮಾ ಆಸಕ್ತರಿಗೆ ಸುವರ್ಣಾವಕಾಶ: ತರಬೇತಿ ಕಾರ್ಯಾಗಾರಕ್ಕೆ‌ ಅರ್ಜಿ ಆಹ್ವಾನ

ಸಿನಿಮಾ ಆಸಕ್ತರಿಗೆ ಸುವರ್ಣಾವಕಾಶ: ತರಬೇತಿ ಕಾರ್ಯಾಗಾರಕ್ಕೆ‌ ಅರ್ಜಿ ಆಹ್ವಾನ

ಸಿನಿಮಾ ಆಸಕ್ತರಿಗೆ ಸುವರ್ಣಾವಕಾಶ: ತರಬೇತಿ ಕಾರ್ಯಾಗಾರಕ್ಕೆ‌ ಅರ್ಜಿ ಆಹ್ವಾನ

ಬೆಂಗಳೂರು, ಅಕ್ಟೋಬರ್, 29,2026 (www.justkannada.in): ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ಯುವ ಪ್ರತಿಭೆಗಳು ಹಾಗೂ ಮಹಿಳೆಯರಿಗಾಗಿ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳಾದ “ಸಿನಿ ಸಂವಾದ” ಹಾಗೂ “ಮಹಿಳಾ ಸಿನಿ ಸಂವಾದ” ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಆನ್‌ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಾರ್ಯಕ್ರಮಗಳ ವಿವರ..

2026ನೇ ನವೆಂಬರ್ 14 ರಿಂದ 16 ರವರೆಗೆ ಸಿನಿ ಸಂವಾದ ಕುರಿತು 3 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ 21 ವರ್ಷಕ್ಕಿಂತ ಮೇಲ್ಪಟ್ಟ ಯುವ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ಸಿನಿಮಾಸಕ್ತರು ಭಾಗವಹಿಸಬಹುದು.

2026 ನೇ ನವೆಂಬರ್ 17 ರಂದು ಮಹಿಳಾ ಸಿನಿ ಸಂವಾದ ಕುರಿತು 1 ದಿನದ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದ್ದು, 21 ವರ್ಷಕ್ಕಿಂತ ಮೇಲ್ಪಟ್ಟ ಆಸಕ್ತ ಯುವತಿಯರು ಮತ್ತು ಮಹಿಳೆಯರಿಗೆ ಚಲನಚಿತ್ರ ನಿರ್ಮಾಣ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ.Cinema Enthusiasts apply

ಅರ್ಜಿ ಸಲ್ಲಿಸುವ ವಿವರ ಹಾಗೂ ನಿಯಮಗಳು..

ಅರ್ಜಿ ಸಲ್ಲಿಸಲು 2026 ನೇ ನವೆಂಬರ್ 10  ಕೊನೆಯ  ದಿನವಾಗಿದ್ದು, ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತರು, ಅಕಾಡೆಮಿಯ ಅಧಿಕೃತ ವೆಬ್‌ ಸೈಟ್ www.kca.karnataka.gov.in ಅಥವಾ kca.filmmakingworkshop@gmail.com ಇಮೇಲ್ ಮೂಲಕ ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ವಿಶೇಷ ​ ಸೂಚನೆ..

ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಅಕಾಡೆಮಿಯ ವತಿಯಿಂದ ಯಾವುದೇ ವಸತಿ ಸೌಲಭ್ಯ ಹಾಗೂ ಪ್ರಯಾಣದ ಖರ್ಚನ್ನು ಒದಗಿಸುವುದಿಲ್ಲ.ಸಿನಿಮಾ ಆಸಕ್ತರಿಗೆ ಸುವರ್ಣಾವಕಾಶ: ತರಬೇತಿ ಕಾರ್ಯಾಗಾರಕ್ಕೆ‌ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆ: 8904645529  (ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದು) ಅಥವಾ ಇಮೇಲ್: chalanachitraacademy@gmail.com ಅಥವಾ ದೂರವಾಣಿ: 080-23493410 / 080-23493441 ಅಥವಾ ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ಅಮೃತೋತ್ಸವ ಭವನ ಸಂಕೀರ್ಣ, ನಂ.20/ಎ, ನಂದಿನಿ ಲೇಔಟ್, ಬೆಂಗಳೂರು – 560096.ಇಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ  ವಿನೋದ್ ಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Applications jk02_new jk02 new

 

English Summary
Title

A Golden Opportunity for Cinema Enthusiasts: Applications Invited for a Training Workshop

Short Description
The Karnataka Film Academy is organizing film production training workshops and seminars—titled "Cini Samvada" (Film Dialogue) and "Mahila Cini Samvada" (Women’s Film Dialogue)—for young talent and women. Applications are invited from interested individuals via an online process. Program Details: A three-day workshop, "Cini Samvada," will be held from November 14 to 16, 2026. It is open to young film producers, directors, technicians, and cinema enthusiasts over the age of 21 who are involved in the film industry. A one-day workshop, "Mahila Cini Samvada," will be held on November 17, 2026, offering specialized training in film production for interested young women and women over the age of 21.
Keywords
Cinema Enthusiasts, Applications, Invited, Training, Workshop