ಬೆಂಗಳೂರು,ಅಕ್ಟೋಬರ್,28,2026 (www.justkannada.in): ಒಂದು ತಿಂಗಳು ಆದ ಮೇಲೆ ಬಿವೈವಿ ಜಾಗವೇ ಗ್ಯಾರಂಟಿ ಇಲ್ಲ. ಹೀಗಿರುವಾಗ ನಮ್ಮ ಬಗ್ಗೆ ಮಾತಾಡುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹಸಚಿವ ಪ್ರಿಯಾಂಕ್ ಖರ್ಗೆ, ಮುಂದಿನ ತಿಂಗಳಲ್ಲಿ ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆಗುತ್ತೆ. ಹೀಗಂತ ಬಿಜೆಪಿ ನಾಯಕರೇ ಮಾತನಾಡುತ್ತಿದ್ದಾರೆ. ಮೊದಲು ವಿಜಯೇಂದ್ರ ತಮ್ಮಸ್ಥಾನವನ್ನ ಗಟ್ಟಿ ಮಾಡಿಕೊಳ್ಳಲಿ. 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಡಿಕೆಶಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಪರಮೇಶ್ವರ್ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ ಎಂದರು.
ಸೌಜನ್ಯಯುತವಾಗಿ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ ಜನರಿಗೆ ಸ್ವಾಭಿಮಾನದ ಬದುಕು ಕೊಡಬೇಕೆಂದು ಪ್ರಯತ್ನಿಸುತ್ತೇವೆ. ನಮ್ಮ ಯಾವ ನಾಯಕರು ಕೂಡ ಧಿಮಾಕಿನಿಂದ ಮಾತನಾಡುತ್ತಿಲ್ಲ. ಬಿಜೆಪಿ ಅಧೀಕಾರದಲ್ಲಿದ್ದಾಗ ಪಿಎಸ್ ಐ ನೇಮಕಾತಿ ಹಗರಣ ಮಾಡಿತು. ಬಿಟ್ ಕಾಯಿನ್ ಹಗರಣ ನಡೆದಾಗ ನಡೆದೇ ಇಲ್ಲ ಎಂದರು. ಸಾರ್ವಜನಿಕ ಸಭೆಯಲ್ಲಿ ಧಮ್ಮು ತಾಕತ್ ಬಗ್ಗೆ ಮಾತನಾಡಿದರು.. ಈ ರೀತಿ ನಾವು ಉಡಾಫೆಯಾಗಿ ಮಾತಾಡಿದ್ದೀವಾ? ಬಿಜೆಪಿ ಅಧಿಕಾರದಲ್ಲಿದ್ದಾಗ ಭಾವನಾತ್ಮಕ ರಾಜಕಾರಣ ಮಾಡಿದರು. ನಾವು ಬುದುಕಿನ ರಾಜಕಾರಣ ಮಾಡುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.






