Wednesday, October 28, 2026

Dasara Wishes

Happy Dasara
Home Front Page ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ಡೀಲ್ ಕೊಡೋದಕ್ಕೆ ನಮಗೆ ತಿಕ್ಕಲು ಹಿಡಿದಿದ್ಯಾ? ಸಚಿವ ಚಲುವರಾಯಸ್ವಾಮಿ

ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ಡೀಲ್ ಕೊಡೋದಕ್ಕೆ ನಮಗೆ ತಿಕ್ಕಲು ಹಿಡಿದಿದ್ಯಾ? ಸಚಿವ ಚಲುವರಾಯಸ್ವಾಮಿ

ಸ್ಟಿಂಗ್‌ ಅಪರೇಷನ್‌ ಜೆಡಿಎಸ್‌ ಬಿಟ್ಟು ಇನ್ಯಾರು ಮಾಡಲು ಸಾಧ್ಯ?- ಸಚಿವ ಚಲುವರಾಯಸ್ವಾಮಿ

ಮಂಡ್ಯ,ಅಕ್ಟೋಬರ್,28,2026 (www.justkannada.in):  ಹೆಚ್ ಡಿ ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ಡೀಲ್ ಕೊಟ್ಟಿದ್ದಾರ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ದೇವೇಗೌಡರ ಕುಟುಂಬ ಮುಗಿಸೋದಕ್ಕೆ 600 ಕೋಟಿ ಡೀಲ್ ಕೊಡಲು ನಮಗೆ ತಿಕ್ಕಲು ಹಿಡಿದಿದೆಯಾ ? ಕುಮಾರಸ್ವಾಮಿ ಇನ್ನೋಬ್ಬರನ್ಮ ಮುಗಿಸಲು ಮಾಡಿದ್ದಾರೆ ವಿನಹ ಇನ್ಯಾರು ಮಾಡಲ್ಲ ಎಂದು ಟಾಂಗ್ ಕೊಟ್ಟರು.

ಕುಮಾರಸ್ವಾಮಿಗೆ ಹಾಸನದ ಪ್ರಕರಣದಲ್ಲಿ 350 ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿದ್ದು ಬೇಕಿಲ್ಲ, ಪೆನ್ ಡ್ರೈವ್ ಬಿಡುಗಡೆ ಮಾಡಿದವರ ವಿರುದ್ದ ಕ್ರಮಕ್ಕೆ ಹೋರಾಟ ಮಾಡುತ್ತಿದ್ದರೂ ಸಂತ್ರಸ್ತರ ಬಗ್ಗೆ ಅನುಕಂಪ ಇಲ್ಲ. ರೆಕಾರ್ಡ್ ಮಾಡಿಕೊಂಡವನನ್ನ ರಕ್ಷಣೆಗೆ ಹೋದರು. ಈಗ ಸ್ಟಿಂಗ್ ಸಾಬೀತಾಗಿದೆಯಾ? ವಾಯ್ಸ್ ರೆಕಾರ್ಡ್ ಇದೆ ಅಷ್ಟೆ. ತ‌ನಿಖೆಯಲ್ಲಿ ಸಾಬೀತಾದರೆ ನೋಡೋಣ ಎಂದರು.ಸ್ಟಿಂಗ್‌ ಅಪರೇಷನ್‌ ಜೆಡಿಎಸ್‌ ಬಿಟ್ಟು ಇನ್ಯಾರು ಮಾಡಲು ಸಾಧ್ಯ?- ಸಚಿವ ಚಲುವರಾಯಸ್ವಾಮಿ

ವಿಡಿಯೋ ಬಿಡುಗಡೆ ಬಗ್ಗೆ 90% ಹುಡುಕಿದ್ದೇವೆ ಕುಮಾರಸ್ವಾಮಿಗೆ ಯಾಕೆ ಸಿಟ್ಟು? ಇವರ ಮನೆ ಹುಡುಗರು, ಸೋಶಿಯಲ್ ಮೀಡಿಯಾ ಹುಡುಗರು, ಡೆಲ್ಲಿ, ನೇಪಾಳಕ್ಕೆ ಹೊಗಿರುವವರು ಯಾರು? ಫೋನ್ ಎಲ್ಲಿ ತೆಗೆದುಕೊಂಡರು, ದಾಖಲೆ ಸಿಕ್ಕಿದೆ ಸಂಬಂಧಿಸಿದ ಅಧಿಕಾರಿಗಳು ದಾಖಲೆ ರಿಲೀಸ್ ಮಾಡುತ್ತಾರೆ. ಅಮೇಲೆ ಪಾಪ ಅವರು ಪರದಾಡಲಿ ಎಂದು ಚಲುವರಾಯಸ್ವಾಮಿ ತಿಳಿಸಿದರು.600-crore hdk1

ದೇವೇಗೌಡರು ಪ್ರಧಾನ ಮಂತ್ರಿಯಿಂದ ಕೆಳಗಿಳಿದಾಗ ರೈಲ್ವೆ ಸ್ಟೇಷನ್ ಗೆ ನಮ್ಮನ್ನೆಲ್ಲ ಕರೆದುಕೊಂಡ ಹೋಗಿ ಹೋರಾಟ ಮಾಡಿದ್ದು ಇದೇ ಕುಮಾರಸ್ವಾಮಿ. ಇದುವರೆಗೂ ಇನ್ನೊಬ್ಬರನ್ನ ತುಳಿಯುವ ಕೆಲಸ ಮಾಡಿಕೊಂಡು ಬಂದಿರುವವರು ಅವರೇ. ಕುಮಾರಸ್ವಾಮಿ ಇನ್ನೋಬ್ಬರನ್ಮ ತಿರಿಸೋದಕ್ಕೆ ಮಾಡಿದ್ದಾರೆ ವಿನಹ ಇನ್ಯಾರು ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.deal jk02_new jk02 new

 

English Summary
Title

Kumaraswamy's ₹600-Crore 'Supari' Deal Allegation Sparks Karnataka Political Row

Short Description
Union Minister H.D. Kumaraswamy has triggered a political storm in Karnataka by alleging that a ₹600-crore "supari" (deal) was made to politically finish off former PM H.D. Deve Gowda’s family. He pointed fingers at CM D.K. Shivakumar, giving the state government a five-day ultimatum regarding an alleged sting operation. In response, Karnataka Cabinet Minister N. Chaluvarayaswamy strongly dismissed the claims, questioning the astronomical figure and accusing Kumaraswamy of character assassination to distract from the Hassan pen-drive case. This massive showdown has further intensified the ongoing political feud between Congress and JD(S).
Keywords
600-crore, deal, finish off, Deve Gowda's, family, HD Kumaraswamy statement, Minister, Chaluvarayaswamy