Saturday, October 24, 2026

Dasara Wishes

Happy Dasara
Home Front Page ಮೈಸೂರು: ಅ. 28ರಂದು ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನಕ್ಕೆ ಚಾಲನೆ

ಮೈಸೂರು: ಅ. 28ರಂದು ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನಕ್ಕೆ ಚಾಲನೆ

ಮೈಸೂರು: ಅ. 28ರಂದು ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನಕ್ಕೆ ಚಾಲನೆ

ಮೈಸೂರು,ಅಕ್ಟೋಬರ್,23,2026 (www.justkannada.in): ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಇ-ಖಾತಾ ಸೇವೆಯನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ, ಮೈಸೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಮಾರ್ಗದರ್ಶನದಲ್ಲಿ ಮತ್ತು ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ ವಿಶೇಷ ಪ್ರಜಾಸೇವಾ ಇ-ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 28-10-2026ರ ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಆಂದೋಲನಕ್ಕೆ ಚಾಲನೆ ನೀಡಲಾಗುವುದು.

ಪಾಲಿಕೆಯ ಎಲ್ಲಾ ಒಂಬತ್ತು ವಲಯ ಕಛೇರಿಗಳ ವ್ಯಾಪ್ತಿಯಲ್ಲಿರುವ ಮನೆಗಳು ಮತ್ತು ನಿವೇಶನಗಳ ಆಸ್ತಿ ಮಾಲೀಕರು ಈ ಆಂದೋಲನದಲ್ಲಿ ಇ-ಖಾತಾ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.  ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲಾದ ಅರ್ಹ ಅರ್ಜಿಗಳನ್ನು ಮೂರು ದಿನಗಳೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮೈಸೂರು: ಅ. 28ರಂದು ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನಕ್ಕೆ ಚಾಲನೆ

ಇ-ಖಾತಾ ವಿತರಣೆ: ದಿನಾಂಕ 31-10-2026ರ ಶನಿವಾರ ಸಂಜೆ 4.00 ಗಂಟೆಗೆ ಇದೇ ಸ್ಥಳದಲ್ಲಿ  ಇ-ಖಾತಾ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು ತಿಳಿಸಿದ್ದಾರೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ಕಡ್ಡಾಯ ದಾಖಲೆಗಳು

ಎ-ಖಾತಾ (A-Khata) ಆಸ್ತಿಗಳಿಗೆ

  1. ನೋಂದಾಯಿತ ಕ್ರಯಪತ್ರ, ದಾನಪತ್ರ ಅಥವಾ ಇತರೆ ನೋಂದಾಯಿತ ಮಾಲೀಕತ್ವದ ದಾಖಲೆ.
  2. ಪ್ರಸ್ತುತ ಸಾಲಿನ ಋಣಭಾರ ಪ್ರಮಾಣಪತ್ರ (EC).
  3. ಪ್ರಸ್ತುತ ಸಾಲಿನ ಪೂರ್ಣ ಆಸ್ತಿ ತೆರಿಗೆ ಪಾವತಿ ರಸೀದಿ.
  4. ಪಾಸ್ಪೋರ್ಟ್ ಸೈಜ್ ನ ಒಂದು ಆಸ್ತಿ ಮಾಲೀಕರ ಭಾವಚಿತ್ರ.
  5. ಆಸ್ತಿಯ ಒಂದು ಭಾವಚಿತ್ರ.
  6. ಆಸ್ತಿ ಮಾಲೀಕರ ಆಧಾರ್ ಕಾರ್ಡ್.

ಬಿ-ಖಾತಾ (B-Khata) ಆಸ್ತಿಗಳಿಗೆ

  1. ದಿನಾಂಕ 10-09-2024ಕ್ಕಿಂತ ಪೂರ್ವದ ನೋಂದಾಯಿತ ಮಾಲೀಕತ್ವದ ದಾಖಲೆಗಳು.
  2. ಋಣಭಾರ ಪ್ರಮಾಣ ಪತ್ರ (EC).
  3. ಪ್ರಸ್ತುತ ಸಾಲಿನ ಪೂರ್ಣ ಆಸ್ತಿ ತೆರಿಗೆ ಪಾವತಿ ರಸೀದಿ.
  4. ಆರ್‌ಟಿಸಿ (RTC).
  5. ಒಂದು ಪಾಸ್ಪೋರ್ಟ್ size ನ ಆಸ್ತಿ ಮಾಲೀಕರ ಭಾವಚಿತ್ರ.
  6. ಒಂದು ಆಸ್ತಿಯ ಭಾವಚಿತ್ರ.
  7. ಆಸ್ತಿ ಮಾಲೀಕರ ಆಧಾರ್ ಕಾರ್ಡ್.

ಮೇಲಿನ ದಾಖಲೆಗಳನ್ನು ಸಂಬಂಧಪಟ್ಟ ಆಸ್ತಿ ಮಾಲೀಕರು ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಮತ್ತು ಅನ್ವಯವಾಗುವ ನಿಯಮಗಳ ಪ್ರಕಾರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು.Mysore jk02_new jk02 new

ಅರ್ಜಿಯ ವಿಧಾನ, ಅಗತ್ಯ ದಾಖಲೆಗಳು ಹಾಗೂ ಇತರೆ ವಿವರಗಳನ್ನು ದಿನಾಂಕ 24-10-2026ರಿಂದ ಮೈಸೂರು ಮಹಾನಗರ ಪಾಲಿಕೆಯ ಅಧಿಕೃತ ವೆಬ್‌ ಸೈಟ್‌ ಹಾಗೂ ಸಾಮಾಜಿಕ ತಾಣದಲ್ಲಿ ವೀಕ್ಷಿಸಬಹುದು ಆದ್ದರಿಂದ, ಸಾರ್ವಜನಿಕರು ಈ ವಿಶೇಷ ಪ್ರಜಾಸೇವಾ ಆಂದೋಲನದ ಸದುಪಯೋಗ ಪಡೆದುಕೊಂಡು,  ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಇ-ಖಾತಾ ಸೇವೆಯನ್ನು ಪಡೆಯಬೇಕೆಂದು ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಮನವಿ ಮಾಡಿದ್ದಾರೆ.

 

English Summary
Title

Praja Seva Special E-Khata Campaign 2026: Digital Property Drive in Mysuru

Short Description
The Praja Seva Special E-Khata Campaign launched by the Government of Karnataka holds a crucial drive in Mysuru on October 28. This property digitalization initiative aims to streamline the transition to e-Aasthi and e-Swathu platforms, helping property owners secure mandatory digital documentation. Field teams are driving doorstep verification to clear backlogs, fix GIS errors, and resolve mutation delays. Property owners must keep their sale deeds, tax receipts, and PID numbers ready for verification. Visit the official e-Aasthi portal or your nearest Mysuru City Corporation (MCC) zonal office to digitalize your property records.
Keywords
Mysore, Praja Seva Special E-Khata Campaign, Oct 28