Tuesday, October 20, 2026

Dasara Wishes

Happy Dasara
Home Front Page ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಖರೀದಿ ಭರಾಟೆ ಜೋರು

ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಖರೀದಿ ಭರಾಟೆ ಜೋರು

ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಖರೀದಿ ಭರಾಟೆ ಜೋರು

ಬೆಂಗಳೂರು, ಅಕ್ಟೋಬರ್, 20,2026 (www.justkannada.in): ಇಂದು  ನಾಡಿನೆಲ್ಲೆಡೆ ಆಯುಧ ಪೂಜೆ ಮತ್ತು ನಾಳೆ ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಪೂಜಾಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿದೆ.

ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ ನಲ್ಲಿ ಪೂಜಾ ಸಾಮಗ್ರಿಗಳ ಖರೀದಿಗೆ ಜನ ಹರಿದು ಬರುತ್ತಿದ್ದು ಮಧ್ಯರಾತ್ರಿಯಿಂದಲೇ ಜನರು ಹೂವು, ಹಣ್ಣು, ನಿಂಬೆಹಣ್ಣು, ಕುಂಬಳಕಾಯಿ, ಬಾಳೆಕಂದು ಸೇರಿದಂತೆ ವಿವಿಧ ಪೂಜಾ ವಸ್ತುಗಳನ್ನು ಖರೀದಿಸುತ್ತಿದ್ದಾರೆ.ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಖರೀದಿ ಭರಾಟೆ ಜೋರು

ದಸರಾ ಹಾಗೂ ಆಯುಧ ಪೂಜೆ ಹಿನ್ನೆಲೆ ಕೆ.ಆರ್ ಮಾರುಕಟ್ಟೆಯಲ್ಲಿ, ಪೂಜಾ ಸಾಮಗ್ರಿ, ಹಣ್ಣು, ಹೂವುಗಳ ಬೆಲೆ ಏರಿಕೆಯಾಗಿದೆ. ಕೆ.ಆರ್. ಮಾರ್ಕೆಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಅವಿನ್ಯೂ ರಸ್ತೆ ಮತ್ತು ಕೆ.ಆರ್. ಮಾರ್ಕೆಟ್‌ನಿಂದ ಟೌನ್ ಹಾಲ್‌ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವ್ಯಾಪಾರಿಗಳು ರಸ್ತೆಗಳನ್ನೇ ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ಆಂಬ್ಯುಲೆನ್ಸ್ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.Ayudha Puja jk02_new jk02 new

 

English Summary
Title

Festive Rush Grips Karnataka for Ayudha Puja & Vijayadashami

Short Description
Karnataka markets are witnessing a massive festive shopping rush for Ayudha Puja and Vijayadashami celebrations. Bustling hubs like KR Market in Bengaluru and Devaraja Market in Mysuru are packed with shoppers buying pooja essentials, including marigold flowers, ash gourds, and banana stalks, despite a 50% price hike. Local traditional markets are fully loaded with vibrant decorations, new clothes, and sweets, creating a lively atmosphere. Families are out in full force to complete their last-minute purchases for vehicle blessings and rituals.
Keywords
Ayudha Puja, Vijayadashami, Celebrations, Market, Shopping