Tuesday, October 20, 2026

Dasara Wishes

Happy Dasara
Home Front Page ಸರ್ಕಾರದೊಳಗೆ ಬ್ಲ್ಯಾಕ್ ಮೇಲ್  ಮಾಡಿ ಆಡಳಿತ: ಇದೊಂದು ಕಪ್ಪುಚುಕ್ಕೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸರ್ಕಾರದೊಳಗೆ ಬ್ಲ್ಯಾಕ್ ಮೇಲ್  ಮಾಡಿ ಆಡಳಿತ: ಇದೊಂದು ಕಪ್ಪುಚುಕ್ಕೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸರ್ಕಾರದೊಳಗೆ ಬ್ಲ್ಯಾಕ್ ಮೇಲ್ ಮಾಡಿ ಆಡಳಿತ: ಇದೊಂದು ಕಪ್ಪುಚುಕ್ಕೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮೈಸೂರು,ಅಕ್ಟೋಬರ್,19,2026 (www.justkannada.in):  ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಅಪರೇಷನ್ ‍ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,  ರಾಜ್ಯದಲ್ಲಿ ಬ್ಲ್ಯಾಕ್ ಮೇಲ್ ಸರ್ಕಾರವಿದೆ. ಅವರ ಪಾರ್ಟಿ ಸರ್ಕಾರದೊಳಗೆ ಬ್ಲ್ಯಾಕ್ ಮೇಲ್  ಮಾಡಿ ಆಡಳಿತ ಮಾಡುತ್ತಿದ್ದಾರೆ.  ಸಿದ್ದರಾಮಯ್ಯರನ್ನ ಇದೇ ರೀತಿ ರಾಜೀನಾಮೆ ಕೊಡಿಸಿದರು ಅನ್ನೋ ಮಾಹಿತಿ ಇದೆ. ಇದೊಂದು ಕಪ್ಪುಚುಕ್ಕೆ. ಅಧಿಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಕಿಡಿಕಾರಿದರು.ಸರ್ಕಾರದೊಳಗೆ ಬ್ಲ್ಯಾಕ್ ಮೇಲ್ ಮಾಡಿ ಆಡಳಿತ: ಇದೊಂದು ಕಪ್ಪುಚುಕ್ಕೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸ್ಟಿಂಗ್ ಮಾಡುತ್ತಾರೆ.  ಸಿಡಿ ಇಟ್ಟುಕೊಂಡು ಕೆಲವರಿಗೆ ಬೆದರಿಸುತ್ತಾರೆ. ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಬೇರೆ ರಾಜ್ಯದವರು ಕೇಳುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ. ಇದಕ್ಕೆ ಇತಿಶ್ರೀ ಹಾಡಬೇಕು, ತಕ್ಷಣ  ಎಸ್ ಐಟಿ ತನಿಖೆ ನಡೆಸಿ ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ನಾನು ಸಿಎಂ ಬಳಿ ಮನವಿ ಮಾಡುತ್ತೇನೆ ಜನ ನಿಮ್ಮತ್ತ ಬೊಟ್ಟು ಮಾಡುತ್ತಿದ್ದಾರೆ ಎಂದರು.Sting Operation blackmail jk02_new jk02 new

Key words:  Sting Operation  blackmail, within, government, Union Minister, Shobha Karandlaje

English Summary
Title

Shobha Karandlaje Calls Karnataka’s Ruling Party a ‘Blackmail Government’

Short Description
Union Minister Shobha Karandlaje launched a scathing attack against the Karnataka state government during a recent media briefing in Mysuru. Karandlaje labeled the current administration a "blackmail government," alleging that ruling party leaders are using targeted sting operations and political manipulation to control the state. She claimed that these internal power struggles and rumors of forced leadership changes mark a dark phase in Karnataka's political history.
Keywords
Sting Operation blackmail, within, government, Union Minister, Shobha Karandlaje