Monday, October 19, 2026

Dasara Wishes

Happy Dasara
Home Front Page ಮೈಸೂರು ದಸರಾ: ಸೆಸ್ಕ್ ಮುಕುಟಕ್ಕೆ ಮತ್ತೊಂದು ಗಿನ್ನಿಸ್ ದಾಖಲೆ

ಮೈಸೂರು ದಸರಾ: ಸೆಸ್ಕ್ ಮುಕುಟಕ್ಕೆ ಮತ್ತೊಂದು ಗಿನ್ನಿಸ್ ದಾಖಲೆ

ಮೈಸೂರು ದಸರಾ: ಸೆಸ್ಕ್ ಮುಕುಟಕ್ಕೆ ಮತ್ತೊಂದು ಗಿನ್ನಿಸ್ ದಾಖಲೆ

ಮೈಸೂರು, ಅಕ್ಟೋಬರ್, 19, 2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ವತಿಯಿಂದ ನಡೆಸಿದ ಡ್ರೋನ್‌ ಪ್ರದರ್ಶನ ಮತ್ತೊಮ್ಮೆ ಜಾಗತಿಕ ದಾಖಲೆ ನಿರ್ಮಿಸುವ ಮೂಲಕ ಗಮನ ಸೆಳೆದಿದೆ. ಕಳೆದ ವರ್ಷ ಡ್ರೋನ್‌ ಗಳ ಮೂಲಕ ಹುಲಿಯ ಚಿತ್ರವನ್ನು ರಚಿಸಿ ಗಿನ್ನಿಸ್ ದಾಖಲೆ ಬರೆದಿದ್ದ ಸೆಸ್ಕ್‌, ಈ ಬಾರಿ 3,473 ಡ್ರೋನ್‌ ಗಳ ಮೂಲಕ ಪಕ್ಷಿ(ನವಿಲು)ಯ ವಿನ್ಯಾಸ ಮೂಡಿಸುವ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆಯ ಗರಿಯನ್ನು ತನ್ನ ಮುಕುಟಕ್ಕೆ ಸೇರಿಸಿಕೊಂಡಿದೆ.

ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಡ್ರೋನ್‌ ಪ್ರದರ್ಶನದಲ್ಲಿ ಈ ನೂತನ ಸಾಧನೆ ದಾಖಲಾಗಿದೆ. ಸಾವಿರಾರು ಡ್ರೋನ್‌ ಗಳು ಏಕಕಾಲದಲ್ಲಿ ಆಕಾಶದಲ್ಲಿ ವಿವಿಧ ಬಣ್ಣಗಳ ಬೆಳಕಿನೊಂದಿಗೆ ಸಂಯೋಜನೆಗೊಂಡು ರಾಷ್ಟ್ರೀಯ ಪಕ್ಷಿ ನವಿಲಿನ ವಿನ್ಯಾಸವನ್ನು ರಚಿಸಿದ್ದು, ಇಡೀ ಮೈದಾನದಲ್ಲಿ ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಒಟ್ಟು 12 ವಿನ್ಯಾಸಗಳಲ್ಲಿ 3,473 ಡ್ರೋನ್‌ ಗಳ ಮೂಲಕ ರಚಿಸಲಾದ ನವಿಲಿನ ವಿನ್ಯಾಸ, ಅತಿ ಹೆಚ್ಚು ಡ್ರೋನ್‌ ಗಳನ್ನು ಬಳಸಿಕೊಂಡು ರಚಿಸಲಾದ ಪಕ್ಷಿಯ ವಿನ್ಯಾಸವೆಂಬ ಹೆಗ್ಗಳಿಕೆಯೊಂದಿಗೆ ಗಿನ್ನಿಸ್‌  ದಾಖಲೆಯ ಪುಟ ಸೇರಿತು.Mysuru Dasara DRONE

ಡ್ರೋನ್‌ ಪ್ರದರ್ಶನದ ನಂತರದ ಲಂಡನ್‌ನಿಂದ ಆಗಮಿಸಿದ್ದ ಗಿನ್ನಿಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ತಂಡ ಸದಸ್ಯರು, ಸೆಸ್ಕ್‌ ವತಿಯಿಂದ ನಿರ್ಮಿಸಲಾದ ನೂತನ ಗಿನ್ನಿಸ್‌ ದಾಖಲೆಯನ್ನು ಅಧಿಕೃತವಾಗಿ ಘೋಷಿಸುವುದರೊಂದಿಗೆ, ಸೆಸ್ಕ್‌ ತಾಂತ್ರಿಕ ನಿರ್ದೇಶಕ ಎಲ್‌. ಲೋಕೇಶ್‌ ಹಾಗೂ ಇತರೆ ಅಧಿಕಾರಿಗಳಿಗೆ ಗಿನ್ನಿಸ್‌ ದಾಖಲೆಯ ಪ್ರಮಾಣ ಪತ್ರವನ್ನು ವಿತರಿಸಿದರು.

ಮತ್ತೆ ಕಂಗೊಳಿಸಿದ ಡ್ರೋನ್‌ ಶೋ:

ಎರಡನೇ ದಿನದಂದು ನಡೆದ ಡ್ರೋನ್‌ ಪ್ರದರ್ಶನವೂ ಪ್ರೇಕ್ಷಕರನ್ನು ರಂಜಿಸಿತು. ಕಿಕ್ಕಿರಿದ್ದು ತುಂಬಿದ್ದ ಬನ್ನಿಮಂಟಪದ ಮೈದಾನದಲ್ಲಿ ನಡೆದ ಪ್ರದರ್ಶನವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆಕಾಶದಲ್ಲಿ ಮೂಡಿ ಬಂದ ಬಣ್ಣ ಬಣ್ಣದ ಡ್ರೋನ್‌ ಗಳ ಬೆಳಕಿನ ಚಿತ್ತಾರಗಳು ಪ್ರೇಕ್ಷಕರಲ್ಲಿ ಸಂಭ್ರಮ ಮೂಡಿಸಿತು.ಮೈಸೂರು ದಸರಾ: ಸೆಸ್ಕ್ ಮುಕುಟಕ್ಕೆ ಮತ್ತೊಂದು ಗಿನ್ನಿಸ್ ದಾಖಲೆ

ಇದಕ್ಕೂ ಮುನ್ನ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಮಣಿಕಾಂತ್‌ ಖದ್ರಿ, ಅನುರಾಧ ಭಟ್‌, ಬಾಲಿವುಡ್‌ ಗಾಯಕಿ ಹಂಸಿಕಾ ಅಯ್ಯರ್‌ ಅವರುಗಳ ತಮ್ಮ ಮನಮೋಹಕ ಗಾಯನದ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದರು. ಈ ಸಮಾರಂಭದಲ್ಲಿ ಶಾಸಕ ಡಿ. ರವಿಶಂಕರ್‌, ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್‌ ಪಾಟೀಲ್‌ ಸೇರಿದಂತೆ ಸೆಸ್ಕ್‌ ಹಾಗೂ ಮುಡಾ ಅಧಿಕಾರಿಗಳು ಹಾಜರಿದ್ದರು.Another jk02_new jk02 new

ಸೆಸ್ಕ್‌ಗೆ ಮತ್ತೊಂದು ದಾಖಲೆಯ ಗರಿ:

2025ರ ದಸರಾ ಅಂಗವಾಗಿ ನಡೆದ ಸೆಸ್ಕ್‌ ನಿಂದ ನಡೆಸಲಾದ ಡ್ರೋನ್‌ ಪ್ರದರ್ಶನದಲ್ಲಿ ಹುಲಿಯ ಚಿತ್ರದ ವಿನ್ಯಾಸಕ್ಕೆ ಸೆಸ್ಕ್‌ ಗಿನ್ನಿಸ್ ದಾಖಲೆಯ ಹಿರಿಮೆ ಪಡೆದಿತ್ತು. ಒಟ್ಟು 2983 ಡ್ರೋನ್‌ ಗಳನ್ನು ಬಳಸಿಕೊಂಡು, ರಾಷ್ಟ್ರೀಯ ಪ್ರಾಣಿ ಹುಲಿಯ ವಿನ್ಯಾಸವನ್ನು ಆಗಸದಲ್ಲಿ ರಚಿಸುವ ಮೂಲಕ ಗಿನ್ನಿಸ್‌ ದಾಖಲೆ ನಿರ್ಮಿಸಲಾಗಿತ್ತು. ಆದರೆ ಈ ಬಾರಿ  ಅದಕ್ಕಿಂತಲೂ ವಿಭಿನ್ನವಾದ ವಿನ್ಯಾಸದ ಮೂಲಕ ಮತ್ತೊಂದು ದಾಖಲೆಗೆ ಸೆಸ್ಕ್‌  ಪಾತ್ರವಾಗಿದೆ.

Key words: Mysuru Dasara, Another, Guinness Record, CESC,  Drone Show

English Summary
Title

Mysuru Dasara 2026: CESC Sets New Guinness World Record With Spectacular Drone Show

Short Description
Mysuru Dasara 2026 has made history yet again as the Chamundeshwari Electricity Supply Corporation (CESC), in collaboration with BotLab Dynamics, secured another Guinness World Record. During the festive aerial display at the Bannimantap Torchlight Parade Grounds, a fleet of 3,473 synchronized drones illuminated the night sky to form a massive, breathtaking peacock. This spectacular feat officially broke the record for the "Largest aerial display of a bird formed by multirotors/drones," surpassing their previous mammalian record of 2,983 drones. For those tracking Karnataka tourism highlights, the record-breaking drone show will return for encore performances on October 20 and 21 at 8:00 PM
Keywords
Mysuru Dasara, Another, Guinness Record, CESC, Drone Show