Saturday, October 17, 2026

Dasara Wishes

Happy Dasara
Home Front Page ರೈತ ದಸರಾದಲ್ಲಿ ನಿರ್ಲಕ್ಷ್ಯ, ಅವ್ಯವಸ್ಥೆ ಆರೋಪ:  ರೈತರಿಂದ ರಸ್ತೆ ತಡೆದು ಪ್ರತಿಭಟನೆ, ಆಕ್ರೋಶ

ರೈತ ದಸರಾದಲ್ಲಿ ನಿರ್ಲಕ್ಷ್ಯ, ಅವ್ಯವಸ್ಥೆ ಆರೋಪ:  ರೈತರಿಂದ ರಸ್ತೆ ತಡೆದು ಪ್ರತಿಭಟನೆ, ಆಕ್ರೋಶ

ರೈತ ದಸರಾದಲ್ಲಿ ನಿರ್ಲಕ್ಷ್ಯ, ಅವ್ಯವಸ್ಥೆ ಆರೋಪ: ರೈತರಿಂದ ರಸ್ತೆ ತಡೆದು ಪ್ರತಿಭಟನೆ, ಆಕ್ರೋಶ

ಮೈಸೂರು, ಅಕ್ಟೋಬರ್,17,2026 (www.justkannada.in): ರೈತ ದಸರಾದಲ್ಲಿ ಹಳ್ಳಿಕಾರ್ ಎತ್ತುಗಳಿಗೆ ಕುಡಿಯಲು ಉತ್ತಮವಾದ ನೀರು ಮತ್ತು ಮೇವು ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದಲ್ಲದೇ ರೈತರಿಗೆ ಉಪಹಾರ ನೀಡದೇ ಕಡೆಗಣಿಸಲಾಗಿದೆ ಎಂದು ಆರೋಪಿಸಿ ದಸರಾ ಉಪ ಸಮಿತಿ ಮತ್ತು ಜಿಲ್ಲಾಡಳಿತದ ವಿರುದ್ಧ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು, ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸುಮಾರು 60 ಜೊತೆ ಹಳ್ಳಿಕಾರ್ ಎತ್ತುಗಳೊಂದಿಗೆ ಆಗಮಿಸಿದ ನೂರಾರು ರೈತರು ದಸರಾ ಉಪ ಸಮಿತಿಯ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.Negligence farmer farmer 1

12 ಗಂಟೆಯಾದರೂ ರೈತರಿಗೆ ಉಪಹಾರ ನೀಡಿಲ್ಲ, ರೈತರನ್ನು ಕಡೆಗಣಿಸಲಾಗಿದೆ. ಹಳ್ಳಿಕಾರ್ ಎತ್ತುಗಳಿಗೆ ನೀರು ಮೇವು ಸರಿಯಾಗಿ ಒದಗಿಸಿಲ್ಲ ಎಂದು ಆರೋಪಿಸಿ ನೂರಾರು ರೈತರು ಕುಕ್ಕರಹಳ್ಳಿ ಕೆರೆ ಪಕ್ಕದ ಕಾಂತರಾಜ ಅರಸು ರಸ್ತೆ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ರೈತ ದಸರಾದಲ್ಲಿ ನಿರ್ಲಕ್ಷ್ಯ, ಅವ್ಯವಸ್ಥೆ ಆರೋಪ: ರೈತರಿಂದ ರಸ್ತೆ ತಡೆದು ಪ್ರತಿಭಟನೆ, ಆಕ್ರೋಶ

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುವ ರೈತ ದಸರಾದಲ್ಲಿ ಹಳ್ಳಿಕಾರ್ ಎತ್ತುಗಳ ಪ್ರದರ್ಶನಕ್ಕೆ ಕರೆಸಲಾಗಿತ್ತು, ಆದರೇ, ರೈತರು ಮಕ್ಕಳಂತೆ ಜೋಪಾನ ಮಾಡಿ ಸಾಕುವ ಎತ್ತುಗಳಿಗೆ ಕನಿಷ್ಠ ಉತ್ತಮವಾದ ಕುಡಿಯುವ ನೀರು ಒದಗಿಸಿಲ್ಲ, ಕಲುಷಿತ ನೀರು ಕೊಡಲಾಗುತ್ತಿದೆ. ಉತ್ತಮವಾದ ಮೇವು ನೀಡಿಲ್ಲ, ಶುಕ್ರವಾರ ರಾತ್ರಿ ನಾವು ರಾಸುಗಳಿಂದ ಬಂದಿರುವ ರೈತರಿಗೆ ಇಲ್ಲಿಯ ತನಕ ಉಪಹಾರವನ್ನೂ ಒದಗಿಸಿಲ್ಲ, ಈ ಸರ್ಕಾರ ಮತ್ತು ಜಿಲ್ಲಾಡಳಿತ, ದಸರಾ ಸಮಿತಿ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಕೇವಲ ಮನರಂಜನೆ ನೀಡುವ ಕಂಬಳಕ್ಕೆ ಆದ್ಯತೆ ನೀಡುತ್ತಿದೆ. ಆದರೇ, ಲೋಕಕ್ಕೆ ಅನ್ನ ನೀಡುವ ನಿಜವಾದ ರೈತರಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಕಿಡಿಕಾರಿದರು.

.ಜಿಲ್ಲಾಡಳಿತದ ವಿರುದ್ಧ ರೈತರು ದಿಢೀರ್ ರಸ್ತೆ ತಡೆ ನಡೆಸಿದ ಪರಿಣಾಮ ರಸ್ತೆ ಸಂಚಾರಕ್ಕೆ ತೀವ್ರ ಅನಾನುಕೂಲ ಉಂಟಾಯಿತು.  ಈ ವೇಳೆ ಸ್ಥಳಕ್ಕೆ ಡಿಸಿಪಿ ಸುಂದರರಾಜು ಆಗಮಿಸಿ ರೈತರ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾಯಿತು. ಒಬ್ಬ ಶಾಸಕ ಬಂದರೆ ನೀವು ಮತ್ತು ಅಧಿಕಾರಿಗಳು ಕೈಕಟ್ಟಿ ನಿಲ್ಲುತ್ತೀರಿ, ರೈತರನ್ನು ದಸರಾಕ್ಕೆ ಕರೆಸಿ ಅವರಿಗೆ ಅವಮಾನ ಮಾಡಿರುವ ಜಿಲ್ಲಾಡಳಿತ ಸ್ಥಳಕ್ಕೆ ಬರುವ ತನಕ ನಾವು ಎದ್ದೇಳುವುದಿಲ್ಲ ಎಂದು ರೈತರು ಬಿಗಿಪಟ್ಟು ಹಿಡಿದು ಘೋಷಣೆ ಕೂಗಿದರು, ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಪೊಲೀಸರ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.mismanagement jk02_new jk02 new

ಕರ್ನಾಟಕ ರಾಜ್ಯ ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಚಿನಕುರಳಿ ಸಿ.ಎಸ್.ಸೋಮೇಗೌಡ, ಬೇವಿನಕುಪ್ಪೆ ಅನೀಲ್ ಇತರರು ಇದ್ದರು.

 

English Summary
Title

Mysuru Raitha Dasara 2026: Farmers Protest

Short Description
Farmers staged a protest against the Dasara Sub-committee and the district administration, expressing their outrage over the neglect shown towards the Hallikar oxen—specifically the failure to provide them with adequate drinking water and fodder—as well as the disregard shown to the farmers themselves by failing to provide them with refreshments. Hundreds of farmers, who arrived from various taluks in the Mysuru and Mandya districts with approximately 60 pairs of Hallikar oxen, voiced strong indignation regarding the negligence and poor organization by the Dasara Sub-committee.
Keywords
Negligence, mismanagement, 'Ryota Dasara, farmers, protest, Mysore