Friday, October 16, 2026

Dasara Wishes

Happy Dasara
Home Front Page ಕಬ್ಬಿನ ದರ ನಿಗದಿ ಬಗ್ಗೆ ಸೋಮವಾರ ಸಭೆ: ಹೋರಾಟ ಬಿಟ್ಟು ನಿಮ್ಮ ಕೆಲಸಕ್ಕೆ ತೆರಳಿ-ಕೇಂದ್ರ ಸಚಿವ...

ಕಬ್ಬಿನ ದರ ನಿಗದಿ ಬಗ್ಗೆ ಸೋಮವಾರ ಸಭೆ: ಹೋರಾಟ ಬಿಟ್ಟು ನಿಮ್ಮ ಕೆಲಸಕ್ಕೆ ತೆರಳಿ-ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಕಬ್ಬಿನ ದರ ನಿಗದಿ ಬಗ್ಗೆ ಸೋಮವಾರ ಸಭೆ: ಹೋರಾಟ ಬಿಟ್ಟು ನಿಮ್ಮ ಕೆಲಸಕ್ಕೆ ತೆರಳಿ-ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಗದಗ,ಅಕ್ಟೋಬರ್‌,16,2026 (www.justkannada.in): ಕಬ್ಬಿನ ದರ ನಿಗದಿ ಬಗ್ಗೆ ಸೋಮವಾರ ಸಮಿತಿ ಮೊದಲ ಸಭೆ ನಡೆಯಲಿದೆ.  ಕಬ್ಬು ಬೆಳೆಗಾರರು ಹೋರಾಟ ಬಿಟ್ಟು ನಿಮ್ಮ ಕೆಲಸಕ್ಕೆ ತೆರಳಬೇಕು. ಎಲ್ಲಾ ವಿಚಾರವನ್ನು ಕೇಂದ್ರ ಸರ್ಕಾರದ ಸಮಿತಿಯೇ ನೋಡಿಕೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಬಹಳ ಪರಿವರ್ತನೆಯಾಗಿದೆ.  ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಬಿಲ್‌ ಗಾಗಿ ಹೋರಾಡುತ್ತಿದ್ದರು.  ಎಥೆನಾಲ್‌ ಆರಂಭವಾದ ಮೇಲೆ ರೈತರಿಗೆ ನಿರಂತರವಾಗಿ ಪಾವತಿ  ಮಾಡಲಾಗುತ್ತಿದೆ. ಕಾಂಗ್ರೆಸ್‌ ಅಧಿಕಾರ ನೀಡಿದಾಗ ಎಥೆನಾಲ್‌ ಮಿಶ್ರಣ 1.5% ಇತ್ತು.  ದೇಶದಲ್ಲಿ 38 ಕೋಟಿ ಲೀಟರ್‌ ಎಥೆನಾಲ್‌ ಖರೀದಿ ಆಗುತ್ತಿತ್ತು,   ಇವಾಗ 1200 ಕೋಟಿ ಲೀಟರ್‌ ಎಥೆನಾಲ್‌ ಖರೀದಿಸುತ್ತಿದ್ದೇವೆ. ಕಬ್ಬಿನಿಂದ ಉತ್ಪಾದನೆ ಆಗುತ್ತಿರುವ  ಎಥೆನಾಲ್‌ ಖರೀದಿ ಮಾಡುತ್ತಿದ್ದೇವೆ. ಎಂದರು.Meeting joshi

ಎಥೆನಾಲ್‌ ಖರೀದಿಯಲ್ಲಿ ರಾಜ್ಯ ಸರ್ಕಾರ ತಮ್ಮ ಜಿಎಸ್‌ ಟಿ ತೆಗೆದುಕೊಳ್ತಾರೆ. ಕಬ್ಬು ತೂಕದಲ್ಲಿ ಆಗುತ್ತಿರುವ ಮೋಸ ತಡೆಯುವ ಕೆಲಸ ಮಾಡುತ್ತಿಲ್ಲ.  ಹರಿಯಾಣ, ಪಂಜಾಬ್‌, ಉತ್ತರ ಖಂಡ್‌ ನಲ್ಲಿ ಎಸ್‌ ಎಪಿ ಕೊಟ್ಟಿದ್ದಾರೆ.  ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಎಎಸ್‌ ಪಿ ಕೊಟ್ಟಿಲ್ಲ.  ಎಂಎಸ್‌ ಪಿ ಕೊಡಬೇಕೆಂದು ಕಬ್ಬು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.  ನಾವು ಈಗಾಗಲೇ ಸಮಿತಿ ರಚಿಸಿದ್ದೇವೆ ಸೋಮವಾರ ಸಭೆ ನಡೆಯಲಿದೆ. ತುರ್ತು ನಿರ್ಣಯ ಕೈಗೊಳ್ಳುತ್ತಾರೆ. ಉಳಿದ ಸಮಸ್ಯೆ ಬಗೆಹರಿಸಲು ಅಧಿಕಾರಿಗಳನ್ನ ನಿಯೋಜನೆ ಮಾಡಿದ್ದೇವೆ.  ಕೇಂದ್ರ ಸರ್ಕಾರ ರೈತರ ಪರವಾಗಿದೆ ಎಂದರು.Meeting jk02_new jk02 new

Meeting, sugarcane price, fixation, Monday, Union Minister,  Pralhad Joshi

English Summary
Title

Sugarcane Price Fixation: Minister Pralhad Joshi Meets Farmers on Fair Pricing

Short Description
Union Minister Pralhad Joshi held a crucial meeting on Monday with sugarcane farmers from Karnataka and Maharashtra to resolve grievances over sugarcane price fixation for the 2026–27 season. Amid calls for a higher Fair and Remunerative Price (FRP), the government formed a four-member committee led by Prof. Ramesh Chand to review the Minimum Support Price (MSP) for sugar. Following the talks, Minister Joshi urged the Karnataka state government to implement a State Advised Price (SAP) to boost farmers' income. He also demanded strict action against sugar mills involved in weighment tampering and under-reporting recovery rates to ensure absolute transparency.
Keywords
Meeting, sugarcane price, fixation, Monday, Union Minister, Pralhad Joshi