Friday, October 16, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಕ್ವಿನ್ ಸಿಟಿ ಯೋಜನೆ: 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ವರದಿ ನೀಡಿ- ಸಚಿವ ಎಂ.ಬಿಪಿ ಸೂಚನೆ

ಕ್ವಿನ್ ಸಿಟಿ ಯೋಜನೆ: 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ವರದಿ ನೀಡಿ- ಸಚಿವ ಎಂ.ಬಿಪಿ ಸೂಚನೆ

ಕ್ವಿನ್ ಸಿಟಿ ಯೋಜನೆ: 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ವರದಿ ನೀಡಿ- ಸಚಿವ ಎಂ.ಬಿಪಿ ಸೂಚನೆ

ಬೆಂಗಳೂರು,ಅಕ್ಟೋಬರ್‌,16,2026 (www.justkannada.in)  ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕ್ವಿನ್ ಸಿಟಿ ಅಭಿವೃದ್ಧಿಯ ವಿಚಾರದಲ್ಲಿ ಮುಂಬರುವ ಫೆಬ್ರವರಿ-ಮಾರ್ಚ್ ವೇಳೆಗೆ ನಿರ್ಣಾಯಕ ಪ್ರಗತಿ ಆಗಬೇಕು. ಇದಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಕೆಐಎಡಿಬಿ ಸಮರೋಪಾದಿಯಲ್ಲಿ 24×7 ಮಾದರಿಯಲ್ಲಿ ಕೂಡಲೇ ಆರಂಭಿಸಬೇಕು. ಜತೆಗೆ ಪ್ರತೀ 15 ದಿನಗಳಿಗೊಮ್ಮೆ ಯೋಜನೆಯ ಪ್ರಗತಿಗೆ ಸಂಬಂಧಿಸಿದ ವರದಿಯನ್ನು ತಮಗೆ ಕೊಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಲ್ಲಿನ ಖನಿಜ ಭವನದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶುಕ್ರವಾರ ಯೋಜನೆಯ ಪರಾಮರ್ಶನಾ ಸಭೆ ನಡೆಸಿ ಸಚಿವ ಎಂ.ಬಿ ಪಾಟೀಲ್‌ ಮಾತನಾಡಿದರು. ಕ್ವಿನ್ ಸಿಟಿ ಯೋಜನೆ ನಮ್ಮ ಸರಕಾರದ ಕನಸಿನ ಕೂಸಾಗಿದೆ. ಇದರ ಸಾಕಾರಕ್ಕಾಗಿ ಕೈಗಾರಿಕಾ ಇಲಾಖೆಯು ಪ್ರತ್ಯೇಕ ತಂಡವನ್ನೇ ರಚಿಸಿ, ಇಡೀ ತಂಡದ ಸಿಬ್ಬಂದಿ ಯೋಜನಾ ಪ್ರದೇಶದಲ್ಲೇ ಕಾರ್ಯನಿರತವಾಗಬೇಕು. ಅಂದರೆ ಭೂಸ್ವಾಧೀನ, ಸಂಪರ್ಕ ರಸ್ತೆ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದಾರೆ.

ಕ್ವಿನ್ ಸಿಟಿ ಪ್ರದೇಶಕ್ಕೆ ಜಾಗತಿಕ ಮಟ್ಟದ ಉದ್ದಿಮೆಗಳು, ವಿಶ್ವವಿದ್ಯಾಲಯಗಳು, ಕಾನೂನು ಶಾಲೆಗಳು, ಐಐಎಸ್ಸಿ ತರಹದ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಸ್ಪತ್ರೆಗಳು, ನಾವೀನ್ಯತಾ ಸಂಸ್ಥೆಗಳು, ನವೋದ್ಯಮಗಳು ಬಂದು ಹೂಡಿಕೆ ಮಾಡಲಿವೆ. ಅಂದ ಮೇಲೆ ನಾವು ಇಲ್ಲಿ ಒದಗಿಸುವ ಸೌಕರ್ಯಗಳು ಕೂಡ ವಿಶ್ವದರ್ಜೆಯದೇ ಆಗಿರಬೇಕು. ಆದ್ದರಿಂದ ಯೋಜನೆಯ ವಿನ್ಯಾಸ ಸಂಸ್ಥೆಯ ಜತೆ ಸಮನ್ವಯ ಸಾಧಿಸಬೇಕು ಎಂದು ಅವರು ಸೂಚಿಸಿದ್ದಾರೆ.ಕ್ವಿನ್ ಸಿಟಿ ಯೋಜನೆ: 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ವರದಿ ನೀಡಿ- ಸಚಿವ ಎಂ.ಬಿಪಿ ಸೂಚನೆ

ಇಲ್ಲಿಗೆ ಬರುವ ಹೂಡಿಕೆದಾರರಿಗೆ ಉತ್ಕೃಷ್ಟ ವಸತಿ ಸೌಕರ್ಯ, ಕಾಮನ್ ಫೆಸಿಲಿಟಿ ಸೆಂಟರ್, ಕ್ರೀಡಾ ಸಂಕೀರ್ಣ, ಸಂಪರ್ಕ ರಸ್ತೆಗಳು, ಉದ್ಯಾನ, ವಿದ್ಯುತ್ ಸಂಪರ್ಕ ಮುಂತಾದ ಮೂಲಸೌಕರ್ಯಗಳನ್ನು ಕೊಡಬೇಕಾಗಿದೆ. ಇವುಗಳನ್ನು ಸಮರೋಪಾದಿಯಲ್ಲಿ ಮುಗಿಸಲು ಅಗತ್ಯವೆನಿಸಿದರೆ ಮತ್ತೊಂದು ಚೀಫ್ ಎಂಜಿನಿಯರ್ ಹುದ್ದೆಯನ್ನು ಸೃಷ್ಟಿಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಅವರು ವಿವರಿಸಿದ್ದಾರೆ.

ಒಟ್ಟಾರೆ ಯೋಜನೆಯು 5 ಸಾವಿರ ಎಕರೆ ಪ್ರದೇಶದಲ್ಲಿ ಜಾರಿಗೆ ಬರಲಿದೆ. ಇಲ್ಲಿಗೆ ಬರುವವರಲ್ಲಿ‌ ಕೆಲವರು ಅವರೇ ತಮ್ಮ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬಹುದು. ಇನ್ನು ಕೆಲವರು ಬಿಲ್ಡ್-ಟು-ಸೂಟ್ ಮಾದರಿಯ ವ್ಯವಸ್ಥೆಯನ್ನು ಬಯಸಬಹುದು. ಮತ್ತೆ ಕೆಲವರು ನಿರ್ಮಾಣ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಕೆಐಎಡಿಬಿ ಇವೆಲ್ಲಕ್ಕೂ ಸಿದ್ಧವಾಗಿರಬೇಕು. ಒಟ್ಟಿನಲ್ಲಿ ಐದು ತಿಂಗಳಲ್ಲಿ ಗರಿಷ್ಠ ಮಟ್ಟದ ಪ್ರಗತಿಯನ್ನು ಸಾಧಿಸಲೇಬೇಕು ಎಂದು ಅವರು ಗುರಿ ನಿಗದಿಪಡಿಸಿದ್ದಾರೆ.'Queen City mb patil mb patil 1

ಹೂಡಿಕೆದಾರರಿಗೆ ಯೋಜನೆಯ ವೈಶಿಷ್ಟ್ಯವನ್ನು ಮನದಟ್ಟು ಮಾಡಿಕೊಟ್ಟು, ತ್ವರಿತವಾಗಿ ಅವರಿಗೆ ನಿವೇಶನ ಒದಗಿಸಬೇಕು. ನಿಧಾನ ಮಾಡಿದರೆ ಬಂಡವಾಳ ಹೂಡುವವರು ಬೇರೆ ಕಡೆಗೆ ಹೋಗುತ್ತಾರೆ. ಎರಡನೆಯ ಹಂತದ ಕೆಲಸಗಳನ್ನು ಕೂಡ ಬೇಗನೆ ಕೈಗೆತ್ತಿಕೊಳ್ಳಬೇಕು. ಒಟ್ಟಾರೆಯಾಗಿ ಇಲ್ಲಿ 50 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದು ಬರುವಂತೆ ಎಲ್ಲರೂ ಶ್ರಮಿಸಬೇಕು ಎಂದು ಪಾಟೀಲರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.Project jk02_new jk02 new

ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ವಿಶೇಷ ಜಿಲ್ಲಾಧಿಕಾರಿ ರಘುನಂದನ್, ಮುಖ್ಯ ಎಂಜಿನಿಯರ್ ವೀರಭದ್ರಯ್ಯ ಉಪಸ್ಥಿತರಿದ್ದರು.‌

 

English Summary
Title

KWIN City Progress: Minister MB Patil Orders Fortnightly Reviews for Mega Project

Short Description
SEO Content: Minister MB Patil has ordered strict 15-day progress reports for Karnataka's massive KWIN City project (formerly KHIR/Queen City). Spanning 5,800 acres near Bengaluru, this knowledge and innovation hub is advancing rapidly. Infrastructure development for Phase 1 (2,000 acres) is underway, with major land allocations secured for institutions like PES University and global giants like Toyota Kirloskar Motor. The fortnightly reviews ensure seamless execution of this mega-development.
Keywords
'Queen City, Project, progress, review, reports, every, 15 days, Minister, M.B. Patil