Friday, October 16, 2026

Dasara Wishes

Happy Dasara
Home Front Page ರಾಜ್ಯಕ್ಕೆ 2ನೇ ಮಹಿಳಾ ರಾಜ್ಯಪಾಲರ ನೇಮಕ; ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ-ಸಿಎಂ ಡಿಕೆ ಶಿವಕುಮಾರ್

ರಾಜ್ಯಕ್ಕೆ 2ನೇ ಮಹಿಳಾ ರಾಜ್ಯಪಾಲರ ನೇಮಕ; ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ-ಸಿಎಂ ಡಿಕೆ ಶಿವಕುಮಾರ್

ರಾಜ್ಯಕ್ಕೆ 2ನೇ ಮಹಿಳಾ ರಾಜ್ಯಪಾಲರ ನೇಮಕ; ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ-ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಅಕ್ಟೋಬರ್‌,16,2026 ():  “ಕರ್ನಾಟಕ ಎರಡನೇ ಮಹಿಳಾ ರಾಜ್ಯಪಾಲರನ್ನು ಪಡೆದಿದ್ದು  ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನವಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ನಡೆದ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರ ಸ್ವಾಗತ ಹಾಗೂ ನಿಕಟಪೂರ್ವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿದರು.

“ಈ ಮೊದಲು ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದ ರಮಾದೇವಿಯವರೊಂದಿಗೆ ಕೆಲಸ ಮಾಡಿದ್ದೇವೆ. ಈಗ ಡಾ. ಸುಧಾ ಯಾದವ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿದೆ. ಹೊಸ  ಉತ್ಸಾಹದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ. ಜನ್ಮದಿನದಂದೇ ಅವರು ರಾಜ್ಯಪಾಲರಾಗಿ  ಪ್ರಮಾಣ ವಚನ ಸ್ವೀಕರಿಸಿರುವುದು ವಿಶೇಷ” ಎಂದು ಶುಭ ಕೋರಿದರು.

“ನಿಕಟ ಪೂರ್ವ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಅವರೊಂದಿಗೆ ಐದು ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರು ನಮ್ಮೊಂದಿಗೆ ಸಹಕರಿಸಿದ್ದಾರೆ” ಎಂದು ಹೇಳಿದರು.ರಾಜ್ಯಕ್ಕೆ 2ನೇ ಮಹಿಳಾ ರಾಜ್ಯಪಾಲರ ನೇಮಕ; ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ-ಸಿಎಂ ಡಿಕೆ ಶಿವಕುಮಾರ್

“ಕರ್ನಾಟಕ ತನ್ನ ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ಗೆಹ್ಲೋಟ್ ಅವರ ಅವಧಿಯಲ್ಲಿ ಅವರಿಗೆ ರಾಜ್ಯದ ಉತ್ತಮ ಆಡಳಿತ, ಸಂಸ್ಕೃತಿ, ಪರಂಪರೆ ಹಾಗೂ ರಾಜ್ಯದ ಜನರ  ಕುರಿತು ಪರಿಚಯವಾಗಿದೆ. ಇಂದು ಅವರು ಅಧಿಕಾರವನ್ನು ಡಾ. ಸುಧಾ ಯಾದವ್ ಅವರಿಗೆ ಹಸ್ತಾಂತರ ಮಾಡಿದ್ದಾರೆ” ಎಂದರು.ರಾಜ್ಯದ ನೂತನ ರಾಜ್ಯಪಾಲರಾಗಿ ಡಾ ಸುಧಾ ಯಾದವ್‌ ಪ್ರಮಾಣ ವಚನ ಸ್ವೀಕಾರ

“ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ  ಗೃಹ ಸಚಿವ ಅಮಿತ್ ಶಾ ಅವರು ನೂತನ  ರಾಜ್ಯಪಾಲರ ನೇಮಕದ ಬಗ್ಗೆ ನನಗೆ ದೂರವಾಣಿಯ ಮೂಲಕ ತಿಳಿಸಿದರು. ರಾಜ್ಯಪಾಲರ ನಿರ್ಧಾರಗಳನ್ನು ರಾಜ್ಯ ಸರ್ಕಾರ ಬಹುತೇಕ ಸ್ವೀಕಾರ ಮಾಡಿದೆ ಎಂದು ಅವರಿಗೆ  ತಿಳಿಸಿದ್ದೇನೆ” ಎಂದರು.

“ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬವಾಗಿರುವ  ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸಬೇಕು” ಎಂದು ಸಿಎಂ ಡಿಕೆ ಶಿವಕುಮಾರ್ ನೂತನ ರಾಜ್ಯಪಾಲರಿಗೆ ಆಹ್ವಾನಿಸಿದರು.

ರಾಜ್ಯದ ಜನರ ಜೀವನ ಸುಧಾರಣೆಗೆ ಮಾರ್ಗದರ್ಶನ

“ಗೆಹ್ಲೋಟ್ ಅವರನ್ನು ಅನೇಕ ವಿಷಯಗಳ ಬಗ್ಗೆ ನಾವು ಸಾಕಷ್ಟು ತೊಂದರೆ ನೀಡಿದ್ದರೂ ಅವರು ಸರ್ಕಾರಕ್ಕೆ ಬೆಂಬಲ ನೀಡಿದ್ದಲ್ಲದೆ, ರಾಜ್ಯದ ಜನರ ಜೀವನ ಸುಧಾರಣೆ ಮಾಡುವ ನಿಟ್ಟಿನಲ್ಲಿ  ಮಾರ್ಗದರ್ಶನವನ್ನು ಕೂಡ ಮಾಡಿದ್ದರು. ಕರ್ನಾಟಕ ಆರ್ಥಿಕ, ತಾಂತ್ರಿಕ, ಉತ್ತಮ ಆಡಳಿತ ಸೇರಿದಂತೆ  ಎಲ್ಲಾ ವಲಯಗಳಲ್ಲಿಯೂ ದೇಶಕ್ಕೆ ಬಹುದೊಡ್ಡ ಶಕ್ತಿ ಮತ್ತು ಕೊಡುಗೆ ನೀಡುತ್ತಿದೆ” ಎಂದರು.second jk02_new jk02 new

“ರಾಜ್ಯದ ಅಧಿಕಾರಿ ವರ್ಗವೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಆಡಳಿತ ವ್ಯವಸ್ಥೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ನಿಮ್ಮೊಂದಿಗೆ ಇದ್ದು,  ನಿಮ್ಮ ಸಹಕಾರಕ್ಕೆ ಧನ್ಯವಾದಗಳು” ಎಂದರು.‌

 

English Summary
Title

Sudha Yadav Sworn In as Karnataka’s Second Female Governor

Short Description
On a historic and significant day for State politics, Dr. Sudha Yadav officially took charge as the second female Governor of Karnataka. The high-profile swearing-in ceremony was attended by prominent dignitaries, including Karnataka CM and Deputy Chief Minister DK Shivakumar, who welcomed the new Governor. This landmark appointment marks a momentous milestone in Karnataka's political history, promising a collaborative era of governance and public welfare between the state government and Raj Bhavan.
Keywords
State, second, female Governor, significant day, Karnataka CM, DK Shivakumar