ಬೆಂಗಳೂರು,ಅಕ್ಟೋಬರ್,13,2026(www.justkannada.in) ಎಸ್ ಸಿ, ಎಸ್ ಟಿ ಮೀಸಲಾತಿ ಪ್ರಮಾಣವನ್ನ ಹೆಚ್ಚಳ ಮಾಡಿದ್ದ ಆದೇಶವನ್ನ ಹೈಕೋರ್ಟ್ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಬೇಕೋ ಬೇಡವೋ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ತೀರ್ಮಾನ ಮಾಡಲಾಗಿತ್ತು. ಅದನ್ನ ಪರಿಗಣಿಸದೇ ಹೈಕೋರ್ಟ್ ರಿಜೆಕ್ಟ್ ಮಾಡಿದೆ. ಈ ವಿಚಾರದ ಬಗ್ಗೆ ಮತ್ತೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಅವಕಾಶ ವಂಚಿತರಿಗೆ ಅನುಕೂಲ ಆಗಲು ಮೀಸಲಾತಿ ತರಲಾಗಿತ್ತು. ಇದೆಲ್ಲವನ್ನೂ ಗಮನಿಸಿ ನ್ಯಾಯಾಲಯವು ಆದೇಶ ನೀಡಬೇಕು. ಮೇಲ್ಮನವಿ ಸಲ್ಲಿಸಬೇಕಾ ಬೇಡವಾ ಅಂತಾ ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಗೃಹ ಸಚಿವನಾಗಿದ್ದಾಗ ಸ್ವಲ್ಪ ಮಾಹಿತಿ ಬರ್ತಿತ್ತು. ಈಗ ನೀವು ಹೇಳಿದಾಗ ತಿಳಿದುಕೊಳ್ಳಬೇಕು ಅಷ್ಟೆ ಎಂದರು.
Quashing, hike , SC/ST reservation, quotas, High court, DCM, Parameshwara.







