ಬೆಂಗಳೂರು,ಅಕ್ಟೋಬರ್,13,2026 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಸ್ಟಿಂಗ್ ಆಗಿದ್ದಕ್ಕೆ ಸ್ಟೇ ತಂದಿದ್ದಾರೆ. ನಾಯಕತ್ವ ವಿಚಾರವಾಗಿ ಈ ರೀತಿ ಆಗಿರಬಹುದು ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ರಾಜ್ಯದಲ್ಲಿ ಒಂದೇ ಫ್ಯಾಕ್ಟರಿ ಇದೆ ಪಾರ್ಟ್ನರ್ ಬೇರೆ ಇದೆ. ರಮೇಶ್ ಜಾರಕಿಹೊಳಿಯದ್ದು ಯಾರು ಮಾಡಿದ್ದು? ನೀವೇ ಹೇಳಿ. ಕರ್ನಾಟಕ ಮಾನ ಮರ್ಯಾದೆ ಹರಾಜು ಆಗುತ್ತಿದೆ. ನಮ್ಮ ಗೌರವವನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಟಿಂಗ್ ಆಪರೇಷನ್ ಸಂಬಂಧ ತನಿಖೆಯಾಗಬೇಕು.. ರಾಜ್ಯದ ಜನರಿಗೆ ಇರುವ ಗೊಂದಲ ದೂರ ಮಾಡಬೇಕು. ನನ್ನ ಮೇಲೂ ಅಟೆಮ್ಟ್ ಮಾಡಿದ್ರು. ಸರ್ಕಾರಿ ನಿವಾಸ ಆಗಿದ್ದರಿಂದ ಸೆಕ್ಯೂರಿಟಿಗೆ ಸಿಸಿಟಿವಿ ಇರುತ್ತೆ. ಸಿಎಂಗೆ ಜವಾಬ್ದಾರಿ ಇದೆ ತನಿಖೆ ಮಾಢಿಸಿ ತೆರೆ ಎಳೆಯಬೇಕು ಎಂದು ಕೆಎನ್ ರಾಜಣ್ಣ ತಿಳಿಸಿದರು.
sting operation, against, Siddaramaiah, Former Minister, K.N. Rajanna.






