ಮೈಸೂರು ,ಅಕ್ಟೋಬರ್,12,2026 (www.justkannada.in): ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಿನ್ನೆ ಅಧಿಕೃತ ಚಾಲನೆ ಸಿಕ್ಕಿದ್ದು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆ ಮತ್ತು ಕುದುರೆಗಳಿಗೆ ಇಂದು 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ನಡೆಯಿತು.
ಮೈಸೂರು ನಗರ ಸಶಸ್ತ್ರ ಪೊಲೀಸರಿಂದ ಕುಶಾಲತೋಪು ಸಿಡಿಸುವಿಕೆ ನಡೆದಿದ್ದು, ಸಿಡಿಮದ್ದು ತಾಲೀಮಿನಲ್ಲಿ 11 ಆನೆಗಳು, 43 ಕುದುರೆಗಳು ಭಾಗಿಯಾಗಿದ್ದವು. ಆದರೆ ಏಕಲವ್ಯ, ಶ್ರೀಕಂಠ ಆನೆಗಳು ಅರಮನೆ ಪೂಜೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸಿಡಿಮದ್ದು ಸಿಡಿಸುವ ತಾಲೀಮಿಗೆ ಗೈರಾಗಿದ್ದವು.
ಸಿಡಿಮದ್ದು ತಾಲೀಮಿನಲ್ಲಿ ಅಭಿಮನ್ಯು, ಧನಂಜಯ, ಪ್ರಶಾಂತ, ಸುಗ್ರೀವ, ಶ್ರೀರಾಮ, ಗೋಪಿ, ಮಹೇಂದ್ರ, ಲಕ್ಷ್ಮಿ, ಚೈತ್ರಾ, ರೂಪ, ಕಾವೇರಿ ಆನೆಗಳು ಭಾಗಿಯಾಗಿದ್ದವು. 7ಪಿರಂಗಿ ಗಾಡಿಗಳ ಮೂಲಕ 21 ಭಾರೀ ಕುಶಾಲತೋಪು ಸಿಡಿಸಲಾಯಿತು. ಯಾವ ಆನೆಗಳು, ಅಶ್ವಗಳು ಸಿಡಿಮದ್ದು ಶಬ್ದಕ್ಕೆ ಬೆದರಲಿಲ್ಲ. ಈ ಮೂಲಕ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಯಿತು.






